ಕಲಬುರಗಿ | ಐಟಿಐ ತರಬೇತಿದಾರರಿಗೆ ಟೂಲ್ ಕಿಟ್ ವಿತರಣೆ

ಕಲಬುರಗಿ: ಆಳಂದ ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿಯ ಕಟ್ಟಡದಲ್ಲಿನ ಸರ್ಕಾರಿ ಐಟಿಐ ತರಬೇತಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತರಬೇತಿದಾರರಿಗೆ ಟೂಲ್ ಕಿಟ್ ವಿತರಣೆ ಮಾಡಲಾಯಿತು.
ಸರಕಾರದಿಂದ ಐಟಿಐ ಕಾಲೇಜಿನಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ನೀಡಿರುವ ಪ್ರಾಯೋಗಿಕ ಸಾಮಗ್ರಿಗಳ ಟೂಲ್ ಕಿಟ್ ಅನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯರಾದ ಸಿದ್ದಪ್ಪ ಜಮಾದಾರ್ ಹೇಳಿದರು.
ಈ ಸಂದರ್ಭದಲ್ಲಿ ಆಳಂದ ತಾಲೂಕಿನ 7 ಖಾಸಗಿ, 1 ಅನುದಾನಿತ, 1 ಸರ್ಕಾರಿ ಐಟಿಐ ಕಾಲೇಜಿನ ಎಸ್‍ಸಿ ಮತ್ತು ಎಸ್‍ಟಿ ತರಬೇತಿದಾರರಿಗೆ ಟೂಲ್ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಐಟಿಐ ಕಾಲೇಜಿನ ಪ್ರಾಚಾರ್ಯರುಗಳಾದ ರಮೇಶ್ ಲಿಂಬಿತೋಟ, ಸುಧಾಕರ್ ಮಾಡಿಯಾಳ, ಶ್ರೀಶೈಲ್ ಗಾಣೊರೆ, ಶಿವಶರಣ ಸೊಡಗೆ, ಅಣ್ಣಪ್ಪ ಅಣಕಲ್, ಸಂತೋಷ್ ವಾಲಿ, ಚಂದ್ರಕಾಂತ್ ಪೂಜಾರಿ, ಅಣ್ಣಾರಾವ್ ದುಗುಂಡ, ಮತ್ತು ಯಶ್ವಂತ್ ಮಾಡಿತೋಟ್, ವಿಶ್ವನಾಥ್, ಗೌರಿಶಂಕರ್, ಪವನ್ ಕುಮಾರ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.





