Kalaburagi | ಟ್ರ್ಯಾಕ್ಟರ್ ಪಲ್ಟಿ : ಚಾಲಕ ಸ್ಥಳದಲ್ಲೇ ಮೃತ್ಯು

ಕಲಬುರಗಿ: ಶಹಾಬಾದ್ ನಗರದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಭೀಮಶಪ್ಪ ನಗರ ಬಳಿ ಪರಸಿ ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಗುರುವಾರ ನಡೆದಿದೆ.
ಮೃತರನ್ನು ಶಹಾಬಾದ್ ತಾಲ್ಲೂಕಿನ ತರನಳ್ಳಿ ಗ್ರಾಮದ ಮಲ್ಲಪ್ಪ ಚಂದ್ರಾಮ ಪೂಜಾರಿ (27) ಎಂದು ಗುರುತಿಸಲಾಗಿದೆ.
ಹಳೆ ಶಹಾಬಾದ್‌ನಿಂದ ಪರಸಿ ತುಂಬಿಕೊಂಡು ಸಿಬಿರಕಟ್ಟಾ ಒಳರಸ್ತೆ ಮೂಲಕ ರಾಜ್ಯ ಹೆದ್ದಾರಿ 125ಕ್ಕೆ ಟ್ರ್ಯಾಕ್ಟರ್ ಏರಿಸುವ ವೇಳೆ ಇಂಜಿನ್ ಮೇಲಕ್ಕೆ ಎದ್ದ ಪರಿಣಾಮ ಚಾಲಕ ಇಂಜಿನ್ ಹಾಗೂ ಟ್ರಾಲಿ ಮಧ್ಯೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಶಹಾಬಾದ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story





