ಕಲಬುರಗಿ: ಸಾಮರ್ಥ್ಯ ಬಲವರ್ಧನೆ ಕುರಿತಾಗಿ ಯುವಕರಿಗೆ ತರಬೇತಿ

ಕಲಬುರಗಿ: ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ ಬೆಂಗಳೂರು ಹಾಗೂ ಪರಿವರ್ತನ್ ರೂರಲ್ ಅರ್ಬನ್ ಎಜುಕೇಶನಲ್ ಡೆವಲಪ್ಮೆಂಟ್ ಸೊಸೈಟಿ, ಕಲಬುರಗಿ ಯುವ ಚೇತನ ಸಂಸ್ಥೆ, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಕಲಬುರಗಿ, ವಿ.ಟಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಕುಸನೂರಿನ ದಾದಾಸಾಹೇಬ್ ಕ್ಯಾನ್ಸಿರಾಮ್ ಮೆಮೋರಿಯಲ್ ಡಿಗ್ರಿ ಕಾಲೇಜ್ ನಲ್ಲಿ ಸಾಮರ್ಥ್ಯ ಬಲವರ್ಧನೆ ಹಾಗೂ ಪಂಚಾಯತ್ ರಾಜ್ ಇನ್ಸ್ಟಿಟ್ಯೂಷನ್ ಅಕ್ಟ್ ಕುರಿತು ಯುವಕ, ಯುವತಿರಿಗಾಗಿ ಮೂರು ದಿನದ ತರಬೇತಿ ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮಣ ಜಾನೇಕಲ್ ಮಾತನಾಡಿ, ಗ್ರಾಮ ಪಂಚಾಯತಿಯಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಕೊಡುವುದರ ಮುಖಾಂತರ ಜಾಗೃತಿಯನ್ನು ಮೂಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ವೀರೇಶ್ ಮಾನ್ವಿ ಮಾತನಾಡಿ, ಪಂಚಾಯತ್ ರಾಜ್ ಇನ್ಸ್ಟಿಟ್ಯೂಷನ್ ಆಕ್ಟ್, ಗ್ರಾಮ ಸಭೆ, ವಾರ್ಡ್ ಸಭೆ, ಹಾಗೂ ಇನ್ನಿತರ ಸ್ಥಳೀಯ ಸಂಸ್ಥೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ವೇಳೆ ಪ್ರೊ. ವಿ.ಟಿ ಕಾಂಬ್ಳೆ, ಸುನಿತಾ ಕಾಂಬಳೆ, ಸಂತೋಷ್ ಗಾಯಕ್ವಾಡ್, ಹಾಗೂ ಐಎಸ್ಐ ಸಂಸ್ಥೆಯ ರಾಜ್ಯ ಸಂಯೋಜಕರಾದ ವಸಂತ್ ಕುಮಾರ್ ಪ್ರತಾಪೆ ಮತ್ತಿತರರು ಉಪಸ್ಥಿತರಿದ್ದರು.





