ಕಲಬುರಗಿ | ತರಬೇತಿ ಕಾರ್ಯಾಗಾರ: ಹೆಸರು ನೋಂದಣಿಗೆ ನ.5 ಕೊನೆಯ ದಿನ
ಕಲಬುರಗಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ "ಸಂಶೋಧನೆ, ಪ್ರಕಟಣೆ ನೀತಿಶಾಸ್ತ್ರ ಮತ್ತು ದತ್ತಾಂಶ ವಿಶ್ಲೇಷಣೆ" (Research, Publication Ethics and Data Analysis) ವಿಷಯದ ಕುರಿತು 2025ರ ನ.11 ರಿಂದ 15 ರವರೆಗೆ ಐದು ದಿನಗಳ ತರಬೇತಿ ಕಾರ್ಯಾಗಾರವನ್ನು ಅಕಾಡೆಮಿಯ ಕಚೇರಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಗಾರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ಉಪನ್ಯಾಸಗಳನ್ನು ನೀಡಲಿದ್ದು, ಆಸಕ್ತ ವಿಜ್ಞಾನ ಪದವಿ, ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು/ಪ್ರಾಧ್ಯಾಪಕರು ಹಾಗೂ ವಿಜ್ಞಾನಾಸಕ್ತರು ಭಾಗವಹಿಸಬಹುದಾಗಿದೆ. ಆಸಕ್ತಿಯುಳ್ಳ ಪ್ರತಿನಿಧಿಗಳು ಗೂಗಲ್ ಫಾರ್ಮ್ https://forms.gle/UNrBg9wiBzgQBMVD6 ಮೂಲಕ 2025ರ ನ.5ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಕಾರ್ಯಾಗಾರದ ಸಂಯೋಜಕ ಹಾಗೂ ವೈಜ್ಞಾನಿಕಾಧಿಕಾರಿ ಶ್ರೀನಿವಾಸು ವಿ.ಕೆ. ಇವರನ್ನು (ಮೊಬೈಲ್ ಸಂ. 9620767819) ಸಂಪರ್ಕಿಸಲು ಅಥವಾ ಅಕಾಡೆಮಿಯ https://kstacademy.in ವೆಬ್‍ಸೈಟ್‍ನ್ನು ವೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.





