ಕಲಬುರಗಿ | ಅಂತರ್ ಜಿಲ್ಲಾ ಮಟ್ಟದ ಎರಡು ದಿನಗಳ ಬಾಸ್ಕೆಟ್ ಬಾಲ್ ಲೀಗ್ ಮುಕ್ತಾಯ

ಕಲಬುರಗಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕಲಬುರಗಿ ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಹಾಗೂ ಫಿಸಿಕಲ್ ಎಜುಕೇಶನ್ ಫೌಂಡೇಶನ್ ಆಫ್ ಇಂಡಿಯಾರವರ ಸಹಯೋಗದಲ್ಲಿ ಮೇಜರ್ ಧ್ಯಾನ್ ಚಂದ್ರ ರಾಷ್ಟ್ರೀಯ ಕ್ರೀಡಾ ಮಹೋತ್ಸವದ ಅಂತರ್ ಜಿಲ್ಲಾ ಮಟ್ಟದ 16 ವರ್ಷದ ಬಾಲಕ - ಬಾಲಕಿಯರ ಅಹ್ವಾನಿತ ಬಾಸ್ಕೆಟ್ ಬಾಲ್ ಲೀಗ್ ನ ಎರಡು ದಿನಗಳ ಕ್ರೀಡಾಕೂಟವು ಸೋಮವಾರ ಸಂಪನ್ನಗೊಂಡಿದೆ.
ಕೂಟದಲ್ಲಿ ಬಾಲಕರ ವಿಭಾಗದಲ್ಲಿ ಕಲಬುರಗಿಯ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ಪ್ರಥಮ ಸ್ಥಾನ, ಎಸ್ ಆರ್ ಎನ್ ಮೆಹತಾ ಶಾಲೆ ದ್ವಿತೀಯ ಸ್ಥಾನ ಹಾಗೂ ಬೀದರ್ ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ತೃತೀಯ ಸ್ಥಾನ ಪಡೆದಿದೆ. ಲೀಗ್ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಕಲಬುರಗಿಯ ಅಭಿಷೇಕ್ ಅವರು ಉತ್ತಮ ಆಟಗಾರ ಪ್ರಶಸ್ತಿ ಪಡೆದರು.
ಬಾಲಕಿಯರ ವಿಭಾಗದಲ್ಲಿ ಎಸ್ ಆರ್ ಎನ್ ಮಹಿತಾ ಶಾಲೆ (ಸ್ಟೇಟ್ ಸಿಲಬಸ್) ಪ್ರಥಮ ಸ್ಥಾನ ಪಡೆದರೆ, ಬೀದರ್ ನ ಇನ್ಫಿನಿಟಿ ಶಾಲೆ ಹಾಗೂ ಕಲಬುರಗಿ ಎನ್. ಪಿ. ಎಸ್. ಶಾಲೆ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದಿವೆ. ಬಾಲಕಿಯರ ಲೀಗ್ ಪಂದ್ಯಾಟದಲ್ಲಿ ಎಸ್ ಆರ್ ಎನ್ ಮೆಹತಾ ಶಾಲೆಯ ಶ್ವೇತಾ ಉತ್ತಮ ಕ್ರೀಡಾಪಟು ಆಗಿದ್ದಾರೆ.
ಡಾ. ಶಂಕರ್ ಸೂರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಬಾಸ್ಕೆಟ್ ಬಾಲ್ ತರಬೇತಿದಾರರು ಪ್ರವೀಣ್ ಪೂಣೆ, ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯನ್ ಕಾರ್ಯದರ್ಶಿ ಡಾ.ಚಂದ್ರಕಾಂತ್ ಶಿರೋಳಿ, ಅಕ್ಕಮಹಾದೇವಿ ಕಾಲೋನಿ ಅಧ್ಯಕ್ಷ ಶಶಿಲ್ ಕುಮಾರ್ ಮಾಮಡಿ, ಹಿರಿಯ ಕ್ರೀಡಾಪಟು ಶಶಿಕಾಂತ್ ಕಮಲಾಪುರ್ ಪರಶುರಾಮ್, ಮಹ್ಮದ ಶಿರಾಜುದ್ದೀನ್, ಅಕ್ಕಮಹಾದೇವಿ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಬಾಟಿ, ಶಿವಕುಮಾರ್ ಗಡ್ಡಿ, ಸಂಜಯ್ ಬಾಣ, ಅಶೋಕ್ ನಿಂಬೂರು, ಬಸವರಾಜ್ ಪಾಟೀಲ್, ಜ್ಯೋತಿ, ಶ್ರೀಕಾಂತ್ ನಿರೋಣಿ, ಸಾವಿತ್ರಿ ಹರಸುರ ಸೇರಿದಂತೆ ಇನ್ನಿತರರು ಇದ್ದರು.
ಡಾ.ರಾಜಕುಮಾರ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ಪವಾರ್ ವಂದಿಸಿದರು.







