ಕಲಬುರಗಿ | ಲಾರಿ-ಬೈಕ್ ಢಿಕ್ಕಿ : ಇಬ್ಬರು ಮೃತ್ಯು

photo: PTI
ಕಲಬುರಗಿ : ಲಾರಿ-ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಶಹಾಬಾದ್ ರಸ್ತೆ ಮರ್ತೂರ ಕ್ರಾಸ್ ಹತ್ತಿರ ಶನಿವಾರ ರಾತ್ರಿ ನಡೆದಿದೆ.
ಮೃತರನ್ನು ಲಾರಿ ಚಾಲಕ ಸೋಲಾಪುರ ಅಭಿಷೇಕ ನಗರ ನಿವಾಸಿ ಮೋಹಿನ್ ಅಬ್ಬು ಸೈಯದ್ ಜಾಗೀರದಾರ (26), 45 ವರ್ಷದ ಅಪರಿಚಿತ ವ್ಯಕ್ತಿ ಎಂದು ಗುರುತಿಸಲಾಗಿದೆ.
ತಮಿಳುನಾಡಿನಿಂದ ಮಹಾರಾಷ್ಟ್ರದ ಲಾತೂರಿಗೆ ಸರಕು ಸಾಗಿಸುತ್ತಿದ್ದ ಲಾರಿಗೆ ಮರ್ತೂರ ಕ್ರಾಸ್ ಹತ್ತಿರ ಹಿಂಬದಿಯಿಂದ ಬಂದ ಮತ್ತೊಂದು ಲಾರಿ ವೇಗವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಲಾರಿಯು ಮುಂದೆ ಚಲಿಸುತ್ತಿದ್ದ ಮೋಟರ್ ಸೈಕಲ್ಗೂ ಗುದ್ದಿದೆ. ಅಪಘಾತದ ತೀವ್ರತೆಗೆ ಲಾರಿ ಚಾಲಕ ಮೋಹಿನ್ ಹಾಗೂ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ತಮಿಳುನಾಡು ಮೂಲದ ಲಾರಿ ಚಾಲಕ ಮಾರಿಯಪ್ಪನ್ ದೂರು ನೀಡಿದ ಮೇರೆಗೆ ಇಲ್ಲಿನ ಸಂಚಾರಿ ಠಾಣೆ -1 ರಲ್ಲಿ ಪ್ರಕರಣ ದಾಖಲಾಗಿದೆ.
Next Story





