ಕಲಬುರಗಿ | ವಕ್ಫ್ ಆಸ್ತಿ ನೋಂದಣಿಗೆ ಉಮೀದ್ ಪೋರ್ಟಲ್ ಸಹಾಯ ಕೇಂದ್ರ ಉದ್ಘಾಟನೆ

ಕಲಬುರಗಿ : ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಹಝರತ್ ಹಾಫಿಜ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರ ಮಾರ್ಗದರ್ಶನದಲ್ಲಿ ಸಂಗತ್ರಾಶ್ ವಾಡಿ ಪ್ರದೇಶದಲ್ಲಿರುವ ಹಿದಾಯತ್ ಸೆಂಟರ್ ನಲ್ಲಿ ಜಮಾಅತೇ ಇಸ್ಲಾಮಿ ಹಿಂದ್ ವತಿಯಿಂದ ಮತ್ತು ಜಿಲ್ಲಾ ವಕ್ಫ್ ಕಚೇರಿಯ ಸಹಯೋಗದೊಂದಿಗೆ ವಕ್ಫ್ ಆಸ್ತಿ ನೋಂದಣಿ ಉಮೀದ್ ಪೋರ್ಟಲ್ ನ ಸಹಾಯ ಕೇಂದ್ರವನ್ನು ಖಾಜಾ ಬಂದಾನವಾಜ್ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ.ಸೈಯದ್ ಮುಸ್ತಫಾ ಅಲ್ ಹುಸೈನಿ ಅವರು ಉದ್ಘಾಟಿಸಿದರು.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಜಿಲ್ಲಾ ಸಂಚಾಲಕರಾದ ಡಾ.ಮುಹಮ್ಮದ್ ಅಝಗರ್ ಚುಲಬುಲ್ ಮಾತನಾಡಿ, ವಕ್ಫ್ ಆಸ್ತಿಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ದಾಖಲೆಗಳ ಡಿಜಿಟಲ್ ನವೀಕರಣದತ್ತ ಹೆಜ್ಜೆಯಿಟ್ಟಿರುವ ಶ್ಲಾಘನೀಯ ಕ್ರಮವಾಗಿದೆ. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (AIMPLB) ಸಂಸ್ಥೆಯೂ ಸಹ ಎಲ್ಲಾ ವಕ್ಫ್ ಸಂಸ್ಥೆಗಳು ತಮ್ಮ ಆಸ್ತಿ ವಿವರಗಳನ್ನು ಉಮೀದ್ ಪೋರ್ಟಲ್ ನಲ್ಲಿ ನಿಗದಿತ ಅವಧಿ 2025ರ ಡಿನ5 ರೊಳಗೆ ಅಪ್ಲೋಡ್ ಮಾಡುವಂತೆ ಹೇಳಿದರು.
ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿ ಅಬ್ದುಲ್ ಮನ್ನಾನ್, ಜಮಾಅತೇ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮೌಲಾನಾ ಯೂಸುಫ್ ಕನ್ನಿ, ಜನಾಬ್ ಸಯ್ಯದ್ ಅಕ್ಬಿಬ್ ಹುಸೈನಿ, ಮುಹಮ್ಮದ್ ಜಿಯಾಉಲ್ಲಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮುಹಮ್ಮದ್ ಮಿನ್ಹಾಜುದ್ದೀನ್ ಹಜೂರ ಕಾರ್ಯಕ್ರಮ ನಿರೂಪಿಸಿದರು.





