ಕಲಬುರಗಿ | ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಏಕತಾ ನಡಿಗೆ

ಕಲಬುರಗಿ : ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮದಿನದ ನಿಮಿತ್ತ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಜಗತ್ ವೃತ್ತದಿಂದ ತಿಮ್ಮಪುರಿ ಸರ್ಕಲ್ ವರೆಗೆ ಏಕತಾ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಏಕತಾ ನಡಿಗೆಯ ಪ್ರಯುಕ್ತ ಜಿಲ್ಲೆಯ ಬಿಜೆಪಿ ಶಾಸಕ, ನಾಯಕರು, ಮುಖಂಡರು ಸೇರಿದಂತೆ ಕಾರ್ಯಕರ್ತರು ಭಾಗವಹಿಸಿ, ತಿಮ್ಮಪುರಿ ಸರ್ಕಲ್ ಸಮೀಪದ ಸರ್ದಾರ್ ವಲ್ಲಭಭಾಯ್ ಪಟೇಲ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಅಮರನಾಥ ಪಾಟೀಲ್, ವಿಶಾಲ್ ದರ್ಗಿ, ರವಿಚಂದ್ರಕಾಂತಿಕರ, ಶರಣಪ್ಪ ತಳವಾರ, ದೇವೇಂದ್ರ ದೇಸಾಯಿ, ಧರ್ಮಣ್ಣಇಟಗಿ, ಸಂತೋಷ ಹಾದಿಮನಿ, ಮಲ್ಲಿಕಾರ್ಜುನ ಜಿನಕೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Next Story





