ಕಲಬುರಗಿ | ಫೆ.1ರಂದು ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ : ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ಹೌಸಿಂಗ್ ಬೋರ್ಡ್ ಫೀಡರ್ ವ್ಯಾಪ್ತಿಯಲ್ಲಿನ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಫೆ.1ರಂದು ಶನಿವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೌಸಿಂಗ್ ಬೋರ್ಡ್ :
ಗಂಜ ಬ್ಯಾಂಕ್ ಕಾಲೋನಿ, ಗಂಜ ಬಸ್‍ಸ್ಟ್ಯಾಂಡ್ ಎದುರುಗಡೆ, ಭವಾನಿ ಗುಡಿ, ಈಶ್ವರಗುಡಿ, ರಾಮಮಂದಿರ, ಬಿಯಾನಿ, ಜಿ.ಓ.ಎಸ್ ಪ್ರದೇಶ, ಲಾಹೊಟಿ ಕಲ್ಯಾಣ ಮಂಟಪ ಹಿಂಭಾಗ ಪ್ರದೇಶ, ಆದರ್ಶ ಸ್ಕೂಲ್ ಪ್ರದೇಶ ಕೆ.ಎಚ್.ಬಿ. ಕಾಲೋನಿ, ನಗರೇಶ್ವರ ಶಾಲೆ ಎದುರುಗಡೆ ಪ್ರದೇಶ, ಕಲಂತ್ರಿ ಬಿಲ್ಡಂಗ್ ಪ್ರದೇಶ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
Next Story





