ಕಲಬುರಗಿ | ವಿ.ಜಿ ವುಮನ್ಸ್ ಕಾಲೇಜಿಗೆ ರನ್ನರ್ ಆಫ್ ಪ್ರಶಸ್ತಿ

ಕಲಬುರಗಿ : ರನ್ನನ ನಾಡು ಮುಧೋಳದಲ್ಲಿ ಜರುಗಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆಯೋಜಿಸಿರುವ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ 20ನೆಯ ಶಕ್ತಿ ಸಂಭ್ರಮದಲ್ಲಿ ಕಲಬುರಗಿ ನಗರದ ಪ್ರತಿಷ್ಠಿತ ಮಹಿಳಾ ಮಹಾವಿದ್ಯಾಲಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಥಿಯೇಟರ್ ಸ್ಪರ್ಧೆಯಲ್ಲಿ ರನ್ನರ್ ಆಫ್ ಪ್ರಶಸ್ತಿ ಪಡೆದುಕೊಂಡಿದೆ.
ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಒನ್ ಆಕ್ಟ್ ಪ್ಲೇ, ಸ್ಕಿಟ್, ಮೈಂ, ಜಾನಪದ ನೃತ್ಯ, ಕ್ರಿಯೇಟಿವ್ ಕೊರಿಯೋಗ್ರಫಿ, ಕ್ಲಾಸಿಕಲ್ ಡ್ಯಾನ್ಸ್, ಡಿಬೇಟ್ ಹೀಗೆ ಹಲವರು ವಿಭಾಗಗಳಲ್ಲಿ ಸ್ಪರ್ಧಿಸಿ ಬಹುಮಾನ ಪಡೆದುಕೊಂಡಿದ್ದಾರೆ.
ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ತಂಡದೊಂದಿಗೆ ಡಾ.ಪರ್ವೀನ್ ರಾಜೇಸಾಬ, ಡಾ.ಮಹೇಶ ಗಂವ್ಹಾರ, ಡಾ.ಪ್ರೇಮಚಂದ ಚವ್ಹಾಣ, ಸಂಗಮೇಶ ತುಪ್ಪದ, ವೈಷ್ಣವಿ ತಿವಾರಿ, ಭಾಗ್ಯಶ್ರೀ, ಸುಷ್ಮಾ ಕುಲಕರ್ಣಿ ಅವರ ನೇತೃತ್ವದಲ್ಲಿ ಶಕ್ತಿ ಸಂಭ್ರಮ ಯುವಜನೋತ್ಸವನದಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶಶಿಲ್ ಜಿ.ನಮೋಶಿ, ಉಪಾಧ್ಯಕ್ಷರಾದ ರಾಜಾ ಬಿ.ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಶ್ ಪಾಟೀಲ್, ಮಹಾವಿದ್ಯಾಲಯದ ಸಂಚಾಲಕರಾದ ನಾಗಣ್ಣ ಘಂಟಿ, ಅರುಣಕುಮಾರ್ ಪಾಟೀಲ್, ಅನಿಲ್ ಕುಮಾರ್ ಮರಗೋಳ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.







