ಕಲಬುರಗಿ | ಗಂಡೋರಿನಾಲಾ ಆಣೆಕಟ್ಟಿನಿಂದ ನದಿಗೆ ನೀರು ಬಿಡುಗಡೆ : ಎಚ್ಚರಿಕೆಯಿಂದಿರಲು ಸೂಚನೆ

ಕಲಬುರಗಿ: ಗಂಡೋರಿನಾಲಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನಿರಂತರವಾಗಿ ಒಳಹರಿವು ಬರುತ್ತಿದೆ. ಈ ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದ್ದು, ಆಣೆಕಟ್ಟಿನ ಸುರಕ್ಷತೆಗಾಗಿ ಆಣೆಕಟ್ಟಿನ ಕೋಡಿಯ ಗೇಟ್‍ಗಳ ಮುಖಾಂತರ ನದಿಗೆ ನೀರನ್ನು ಹರಿಬಿಡಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಮಹಾಗಾಂವ ಉಪವಿಭಾಗದ ಗಂಡೋರಿನಾಲಾ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಗಂಡೋರಿ ನಾಲಾ ಆಣೆಕಟ್ಟಿನ ನದಿ ಪಾತ್ರದ ರೈತರು, ಸಾರ್ವಜನಿಕರು, ದನಕರುಗಳನ್ನು ಮೇಯಿಸುವವರು ದನಕರುಗಳಿಗೆ ನೀರು ಕುಡಿಸಲು ಹಳ್ಳದಲ್ಲಿ ಇಳಿಯಬಾರದು. ಮೀನು ಹಿಡಿಯಲು, ಬಟ್ಟೆ ಒಗೆಯಲು ಹಾಗೂ ಇನ್ನಿತರ ಯಾವುದೇ ಕಾರಣಕ್ಕಾಗಿ ನದಿಯಲ್ಲಿ ಇಳಿಯಬಾರದು. ನದಿಯ ಪಾತ್ರದಲ್ಲಿರುವ ಸಾರ್ವಜನಿಕರ ಆಸ್ತಿಗಳಿದ್ದಲ್ಲಿ ಮುಂಜಾಗ್ರತೆಯಾಗಿ ಸುರಕ್ಷಿತ ಕ್ರಮ ಕೈಗೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
Next Story







