ಕಲಬುರಗಿ| ಬಾಣಂತಿ ಮೃತ್ಯು : ವೈದ್ಯರ ನಿರ್ಲಕ್ಷ್ಯ ಆರೋಪ

ಕಲಬುರಗಿ: ಗರ್ಭಿಣಿಯೊಬ್ಬರು ಹೆರಿಗೆ ಬಳಿಕ ಮೃತಪಟ್ಟಿರುವ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮದ ನಿವಾಸಿ ಸಂಗೀತಾ (30) ಮೃತಪಟ್ಟ ಬಾಣಂತಿ ಎಂದು ತಿಳಿದುಬಂದಿದೆ.
ಸಂಗೀತಾ ಅವರಿಗೆ ಗುರುವಾರ ರಾತ್ರಿ ಸಾಮಾನ್ಯ ಹೆರಿಗೆಯಾಗಿದೆ. ಆ ಬಳಿಕ ಸಂಗೀತಾಗೆ ರಕ್ತಸ್ರಾವ ಆಗುತ್ತಿರುವ ಬಗ್ಗೆ ವೈದ್ಯರು ಹೇಳಿದ್ದಾರೆ. ಇದಾದ ಎರಡು ಮೂರು ಗಂಟೆಗಳಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಘಟನೆ ಬ್ರಹ್ಮಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಸಂಗೀತಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಸಂಬಂಧಿಕರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Next Story





