ಕಲಬುರಗಿ | ಮಹಿಳಾ ದಿನಾಚರಣೆಯು ದಿನನಿತ್ಯ ನೆನೆಯುವ ದಿನವಾಗಿದೆ : ಬಿ.ಕೆ.ಜಯಶ್ರೀ

ಕಲಬುರಗಿ : ಮಹಿಳಾ ದಿನಾಚರಣೆ ಕೇವಲ ಒಂದು ದಿನ ಆಚರಣೆ ಮಾಡುವುದಲ್ಲ, ದಿನನಿತ್ಯ ನೆನೆಯುವ ದಿನವಾಗಿದೆ ಎಂದು ಶಹಾಬಾದನ ಬ್ರಹ್ಮಾಕುಮಾರಿ ಆಶ್ರಮದ ಬ್ರಹ್ಮಾಕುಮಾರಿ ಜಯಶ್ರೀ ಅವರು ಹೇಳಿದರು.
ಶಹಾಬಾದ್ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ಮಹಿಳೆ ಪುರುಷರಿಗಿಂತ ಕಡಿಮೆಯಲ್ಲ, ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಬೆಳೆದು ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ, ಸ್ತ್ರೀ ಅನೇಕ ಶಕ್ತಿಯನ್ನು ಹೊಂದಿದ್ದಾಳೆ ಎಂದರು.
ತಾಯಿಯ ಗರ್ಭದಲ್ಲಿ ಇರುವಾಗಲೇ ಮಗುವಿನ ಮೇಲೆ ತಾಯಿ ಯೋಚನೆ ಮಾಡುವುದು ಮತ್ತು ಪ್ರತಿಯೊಂದು ಚಿಂತನೆಗಳ ಪ್ರಭಾವ ಮಗುವಿನ ಮೇಲೆ ಬೀಳುತ್ತದೆ. ತಾಯಿಯ ಸಂಸ್ಕಾರವು ಮಗು ಜನ್ಮ ತಾಳುವದರ ಜೊತೆಗೆ ಬರುತ್ತದೆ, ನಮ್ಮ ಜೀವನ ಕೇವಲ ಸಿನಿಮಾ ಅಲ್ಲ, ನಮ್ಮ ಜೀವನ ಶ್ರೇಷ್ಠವಾದದ್ದು ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಅಶ್ವಿನಿ ಮಾತನಾಡಿ, ಹೆಣ್ಣು ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗದೆ ಧೈರ್ಯದಿಂದ ಬದುಕಬೇಕು, ಪ್ರಪಂಚದಲ್ಲಿ ಹೆಣ್ಣಿಗೆ ಶ್ರೇಷ್ಠವಾದ ಸ್ಥಾನ ಇದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯ ಮಹಾನಂದ, ಬಿಜೆಪಿಯ ಜ್ಯೋತಿ ಶರ್ಮ, ಪದ್ಮ ಕಟ್ಟಿಗೆ ಹಾಗೂ ನಂದಾ ಗುಡೂರ ವೇದಿಕೆ ಮೇಲೆ ಇದ್ದರು. ಸಿದ್ರಾಮ ಕುಸಾಳೆ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಶಿಕಲಾ ಸಜ್ಜನ್, ಸನ್ನಿಧಿ ಕುಲಕರ್ಣಿ, ನೀಲಗಂಗಮ್ಮ ಗಂಟ್ಲಿ, ಜಯಶ್ರೀ ಸೂಡಿ ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಪಕ್ಷದ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.







