ಕಲಬುರಗಿ | ಮಹಿಳಾ ಆರೋಗ್ಯ–ನೈರ್ಮಲ್ಯ ಜಾಗೃತಿ ಕಾರ್ಯಕ್ರಮ

ಕಲಬುರಗಿ: ಜಂಕ್ ಫುಡ್‌ಗೆ ಮೊರೆಹೋಗದೆ, ನಿಯಮಿತ ವ್ಯಾಯಾಮ ಮಾಡಿ, ಯಾವಾಗಲೂ ಶುಚಿತ್ವ ಕಾಪಾಡಿಕೊಳ್ಳಿ ಎಂದು ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಮಂಗಳವಾರ ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ನಿಕಾಯದ ಮಹಿಳಾ ಬಿ.ಬಿ.ಎ. ವಿಭಾಗ, ಶರಣಬಸವ ಆಯುರ್ವೇದಿಕ ಆಸ್ಪತ್ರೆ ಹಾಗೂ ವಿವಿಯ ಮಹಿಳಾ ಸಬಲೀಕರಣ ಕೋಶದ ವತಿಯಿಂದ ಆಯೋಜಿಸಲಾದ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಬೆಳಿಗ್ಗೆ ಬೇಗನೆ ಎದ್ದೇಳುವ ಅಭ್ಯಾಸ ರೂಢಿಸಿಕೊಳ್ಳಿ. ಮನೆ ಕೆಲಸದಲ್ಲಿ ಹಿರಿಯರಿಗೆ ಕೈಜೋಡಿಸಿ. ಇತರರನ್ನು ನೋಡಿ ಅಸೂಯೆ ಪಡಬೇಡಿ, ನಿಮ್ಮನ್ನು ಯಾರೊಂದಿಗೂ ಹೋಲಿಸಿಕೊಳ್ಳಬೇಡಿ. ಸದಾ ಲವಲವಿಕೆಯಿಂದಿದ್ದು, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿರಿಸಿ. ಯಾವಾಗಲೂ ಕೈ ತೊಳೆಯುವ ಅಭ್ಯಾಸ ರೂಢಿಸಿಕೊಂಡರೆ ಮನಸ್ಸು ಉಲ್ಲಾಸದಿಂದ, ಆರೋಗ್ಯ ಉತ್ತಮವಾಗಿರುತ್ತದೆ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶರಣಬಸವ ಆಯುರ್ವೇದಿಕ ಆಸ್ಪತ್ರೆಯ ಡಾ.ರುದ್ರಾಣಿ ದೇಶಮುಖ ಮಾತನಾಡಿದರು.
ಮಹಿಳಾ ಬಿ.ಬಿ.ಎ. ವಿಭಾಗದ ಚೇರ್‌ಪರ್ಸನ್ ಡಾ.ಶಿಲ್ಪಾ ಕಂದಗೂಳ, ವಿವಿಯ ಮಹಿಳಾ ಸಬಲೀಕರಣ ಕೋಶದ ಚೇರ್‌ಪರ್ಸನ್ ಡಾ.ಶಿಲ್ಪಾ ಶ್ರೀಗಿರಿ, ನೀರಜ ತಡಕಲ, ಶಿವರಾಜ ನಾಲವಾರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





