ಕಲಬುರಗಿ | ಜಾತಿ ಕಾಲಂನಲ್ಲಿ ಕೊರಮ ಎಂದು ಬರೆಯಿಸಿ : ಮಲ್ಲೇಶ್ ಭಜಂತ್ರಿ

ಕಲಬುರಗಿ : ಮೇ 5ರಿಂದ 17 ವರೆಗೆ ಮೊದಲ ಹಂತದಲ್ಲಿ ನಡೆಯುತ್ತಿರುವ ಒಳಮೀಸಲಾತಿಯ ಜಾತಿ ಗಣತಿಯಿಂದ ಅಲೆಮಾರಿ ಕೊರಮ ಸಮುದಾಯದವರ ಯಾವುದೇ ಮನೆ ಹೊರಗೆ ಉಳಿಯದೇ ಗಂಭೀರತೆಯನ್ನು ಅರಿತುಕೊಂಡು ಕೊರಮ, ಕೊರಚ ಸಮಾಜ ಕುಟಂಬಗಳು ಈ ಗಣತಿಯಲ್ಲಿ ಕಡ್ಡಾಯವಾಗಿ ಭಾಗಿಯಾಗಿ ಜಾತಿ ಕಾಲಂನಲ್ಲಿ ಕೊರಮ ಎಂದೇ ಬರೆಸಬೇಕು ಎಂದು ಶಹಾಬಾದ್ ತಾಲ್ಲೂಕು ಕೊರಮ ಸಮಾಜದ ಅಧ್ಯಕ್ಷ ಮಲ್ಲೇಶ್ ಭಜಂತ್ರಿ ಅವರು ಮನವಿ ಮಾಡಿದ್ದಾರೆ.
ಬುಧವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2011ರ ಜನ ಗಣತಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 20 ರಿಂದ 25 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕೊರಮ, ಕೊರಚ ಸಮುದಾಯದ ಕುಟುಂಬಗಳು ಇವೆ. ನಮ್ಮ ಸಮುದಾಯ ಕುಟುಂಬದ ನಿರ್ವಹಣೆಗಾಗಿ ವಲಸೆ ಹೋಗಿ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಪರಿಶಿಷ್ಠ ಜಾತಿಯ ಅಲೆಮಾರಿ ಸಮುದಾಯಗಳನ್ನು ನಿಖರವಾಗಿ ಗುರುತಿಸಲು ವಿಶೇಷ ಕಾಳಜಿವಹಿಸುವಂತೆ ಗಣತಿದಾರರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲ್ಯಾಣಿ ಭಜಂತ್ರಿ, ಜಗನ್ನಾಥ ಭಜಂತ್ರಿ, ಮಂಜುಳಾ ಭಜಂತ್ರಿ, ಸುನೀಲ್ ಮಾನ್ಪಡೆ, ಶರಣಬಸಪ್ಪ, ಶಶಿಕುಮಾರ್ ಭಜಂತ್ರಿ ಸೇರಿದಂತೆ ಇತರರು ಇದ್ದರು.





