ಕಲಬುರಗಿ: ಕಾರಾಗೃಹದ ಕೈದಿಗಳಿಗೆ ಯೋಗ ತರಬೇತಿ
ಕಲಬುರಗಿ: 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಅಡಿಯಲ್ಲಿ ಬರುವ ಯೋಗ ಧನುಷ್ ಕಾರ್ಯಕ್ರಮದ ಪ್ರಯುಕ್ತ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಆಯುಷ್ ಇಲಾಖೆಯ ವತಿಯಿಂದ ಯೋಗ ತರಬೇತಿದಾರರಿಂದ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಕಾರಾಗೃಹದ ಕೈದಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಯೋಗ ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ಅನುಷ್ಠಾನಾಧಿಕಾರಿ ಡಾ.ಸಂಜಯ್ ಕುಲಕರ್ಣಿ, ವೈದ್ಯಾಧಿಕಾರಿ ಡಾ.ಸ್ಮಿತಾ ಅಂಬುರೆ ಹಾಗೂ ಯೋಗ ತರಬೇತಿದಾರ ಸುದೀಪ್ ಮಾಳಗಿ, ಶಶಿಕಲಾ ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಡಾ. ಅನಿತಾ ಆರ್., ಅಧೀಕ್ಷಕ ಎಂ.ಹೆಚ್. ಆಶೇಖಾನ್, ಸಹಾಯಕ ಅಧೀಕ್ಷಕ ಚನ್ನಪ್ಪ, ಹಾಗೂ ಸಂಸ್ಥೆಯ ಜೈಲರ್‍ಗಳಾದ ಸುನಂದ ವಿ., ಸಾಗರ್ ಪಾಟೀಲ್, ಶ್ರೀಮಂತಗೌಡ ಹಾಗೂ ಶಿಕ್ಷಕ ನಾಗರಾಜ ಮೂಲಗೆ ಉಪಸ್ಥಿತರಿದ್ದರು.
Next Story







