ಕಲಬುರಗಿ | ಕುರಿಕೋಟಾ ಸೇತುವೆ ಮೇಲಿಂದ ಹಾರಿದ ಯುವತಿ

ಕಲಬುರಗಿ: ಜೀವನದಲ್ಲಿ ಜಿಗುಪ್ಸೆಗೊಂಡು ನಗರದ ಹೊರವಲಯದಲ್ಲಿರುವ ಕುರಿಕೋಟಾ ಹಳೆಯ ಸೇತುವೆ ಮೆಲಿಂದ ಹಾರಿದ್ದ ಯುವತಿವೋರ್ವಳು ನಾಪತ್ತೆಯಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕಮಲಾಪುರ ತಾಲೂಕಿನ ಮಹಾಗಾಂವ್ ಗ್ರಾಮದ ನಿವಾಸಿ ಎನ್ನಲಾಗುತ್ತಿರುವ ತ್ರೀವೇಣಿ ಸೂರ್ಯಕಾಂತ (30) ಎಂಬ ಯುವತಿ ನದಿಗೆ ಹಾರಿದ್ದಾಳೆ ಎಂದು ತಿಳಿದುಬಂದಿದೆ.
ಶುಕ್ರವಾರದಿಂದ ನಾಪತ್ತೆಯಾಗಿರುವ ಯುವತಿಯ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ, ಆದರೆ ಇವರೆಗೆ ಯುವತಿ ಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆ ರವಿವಾರವೂ ಮುಂದುವರೆದಿದೆ ಎಂದು ಮಹಾಗಾಂವ್ ಪೊಲೀಸ್ ಠಾಣೆಯ ಪಿಎಸ್ಐ ಅವರು ತಿಳಿಸಿದ್ದಾರೆ.
ಘಟನೆ ಮಹಾಗಾಂವ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
Next Story





