ಕಾಳಗಿ | ಬೆಳಕು ಜ್ಞಾನದ ಸಂಕೇತ: ಹೊನ್ನಕಿರಣಗಿ ಶ್ರೀ

ಕಾಳಗಿ, ಜ. 7: ಬೆಳಕಿಲ್ಲದ ಬದುಕಿಗೆ ಬೆಲೆಯಿಲ್ಲ. ಬೆಳಕು ಬದುಕಿನ ಅವಿಭಾಜ್ಯ ಅಂಗವಾಗಿದ್ದು, ದೀಪ ಹಾಗೂ ಬೆಳಕು ಜ್ಞಾನದ ಸಂಕೇತವಾಗಿದೆ ಎಂದು ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಸಹಸ್ರ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗದ ಕತ್ತಲೆ ಕಳೆಯಲು ಸೂರ್ಯಬೇಕು, ಬದುಕಿನ ಅಜ್ಞಾನ ತೊಳೆಯಲು ಗುರುಬೇಕು, ಹಚ್ಚುವುದಾದರೆ ದೀಪ ಹಚ್ಚು ಆದರೆ, ಬೆಂಕಿ ಹಚ್ಚಬೇಡ, ಆರಿಸುವುದಾದರೆ ಬೆಂಕಿ ಆರಿಸು ಆದರೆ, ದೀಪ ಆರಿಸಬೇಡ ಎಂದು ಸ್ವಾಮೀಜಿ ಹೇಳಿದರು.
ಹಲಕರ್ಟಿ ಪೂಜ್ಯ ಅಭಿನವ ಮುನಿಂದ್ರ ಶಿವಾಚಾರ್ಯ ಮಹಾಸ್ವಾಮಿ ಆಶಿರ್ವಚನ ನೀಡಿ, ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮ ಪರಿಪಾಲನೆ ಅಗತ್ಯವಾಗಿದೆ. ಅರಿವಿನ ದಾರಿಯಲ್ಲಿ ಮುನ್ನಡೆಸುವ ಗುರುವಿನ ಕರುಣೆಯೇ ದೊಡ್ಡದು ಎಂದರು.
ಕೋಡ್ಲಿಯ ಪೂಜ್ಯ ಬಸವಲಿಂಗ ಶಿವಾಚಾರ್ಯರು, ರಟಕಲ್ ದೊಡ್ಡಮಠದ ನೀಲಕಂಠ ದೇವರು, ಬೆಳಗುಂಪ ಅಭಿನವ ಪರುರೇಶ್ವರ ಶಿವಾಚಾರ್ಯರು, ಯುವ ಮುಖಂಡರಾದ ಆಕಾಶ ಮತ್ತಿಮಡು, ರಾಹುಲ ಯಾಕಾಪೂರ ಮಾತನಾಡಿದರು.
ಕೋಡ್ಲಿ ಗ್ರಾಪಂ ಅಧ್ಯಕ್ಷೆ ಗೀತಾ ಯಲ್ಮಡಗಿ, ಜಿಪಂ ಮಾಜಿ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಪಪಂ ಸದಸ್ಯ ರಮೇಶ ಕಿಟ್ಟದ, ಶಶಿಕಾಂತ ಅಡಕಿ, ಶಿವಶರಣಪ್ಪ ಸೀರಿ, ರಮೇಶ ನಲವಾಡೆ, ಖತಲಯ್ಯ ಗುತ್ತೆದಾರ, ಲಕ್ಷ್ಮಣ ಭೋವಿ, ರಮೇಶ ಉಪ್ಪಾರ, ರೇವಣಸಿದ್ದಯ್ಯ ಕುಡ್ಡಳ್ಳಿ, ಅಣ್ಣರಾವ ಪೆದ್ದಿ, ದೇವಾಂಗ ಸಮಾಜ ಅಧ್ಯಕ್ಷ ಹಣಮಂತರಾವ ಹಳ್ಳಿ, ರಾಮಣ್ಣ ಪಾಟೀಲ, ಬಂಡಪ್ಪ ಕಿಟ್ಟದ, ಚಂದ್ರಕಾಂತ ಮುಚ್ಚಟ್ಟಿ, ಸಿದ್ರಾಮಪ್ಪ ಹಳ್ಳಿ, ಶಂಕರ ಹಳ್ಳಿ, ಶಿವಪ್ಪ ಕಣ್ಣಿ, ಭೀಮರಾವ್ ಎನ್ ಪಾಟೀಲ, ಸಂತೋಷ ಹಳ್ಳಿ, ಚಂದ್ರಶೇಖರ ಪಾಟೀಲ, ವಿಠ್ಠಲ ಅಡಕಿ, ಗುಂಡಪ್ಪ ಮೋಘಾ, ಶ್ರೀಮಂತ ಗಂಜಿ, ಹಣಮಂತರಾವ ಕಂಚನಾಳ ಉಸ್ಥಿತರಿದ್ದರು.







