ಕಾಳಗಿ | ರಾಜಾಪೂರ ಗ್ರಾಪಂ ಅಧ್ಯಕ್ಷರಾಗಿ ಮತ್ತೆ ಮುಂದುವರೆದ ಪ್ರಕಾಶರೆಡ್ಡಿ

ಕಾಳಗಿ : ತಾಲೂಕಿನ ರಾಜಾಪೂರ ಗ್ರಾಪಂ ಅಧ್ಯಕ್ಷ ಪ್ರಕಾಶರೆಡ್ಡಿ ಸದಸ್ಯತ್ವ ಪಂಚಾಯತ್ ರಾಜ್ ಇಲಾಖೆ ರದ್ದುಗೊಳಿದನ್ನು ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಮತ್ತೆ ರಾಜಾಪೂರ ಗ್ರಾಪಂ ಅಧ್ಯಕ್ಷರಾಗಿ ಪ್ರಕಾಶರೆಡ್ಡಿ ಅವರೇ ಮುಂದುವರೆಯಲಿದ್ದಾರೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ ತಿಳಿಸಿದ್ದಾರೆ.
ಈ ಹಿಂದೆ ರಾಜಾಪೂರ ಗ್ರಾಪಂ ಅಧ್ಯಕ್ಷ ಪ್ರಕಾಶರೆಡ್ಡಿ ಅವರ ಮೇಲಿನ ಲಂಚದ ಆರೋಪ ಸಾಬೀತಾಗಿದ್ದರಿಂದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಪ್ರಕಾಶರೆಡ್ಡಿ ಅವರ ಗ್ರಾಮ ಪಂಚಾಯತ್ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಇದನ್ನು ಮರು ಪ್ರಶ್ನಿಸಿ ಪ್ರಕಾಶರೆಡ್ಡಿ ಅವರು ಕಲಬುರಗಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದಾಗ ಗ್ರಾಪಂ ಸದಸ್ಯತ್ವ ಅನರ್ಹತೆಗೆ ತಡೆಯಾಜ್ಞೆ ನೀಡಿದೆ, ಹಾಗಾಗಿ ಮತ್ತೆ ಪ್ರಕಾಶರೆಡ್ಡಿ ಮಲ್ಲರೆಡ್ಡಿ ಅವರೇ ರಾಜಾಪೂರ ಗ್ರಾಪಂ ಅಧ್ಯಕ್ಷರಾಗಿ ಮುಂದುವರೆಯಲ್ಲಿದ್ದಾರೆ ಎಂದು ಡಾ. ಬಸಲಿಂಗಪ್ಪ ಡಿಗ್ಗಿ ತಿಳಿಸಿದ್ದಾರೆ.
Next Story





