ಕಾಳಗಿ | ರುಮ್ಮನಗೂಡ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸುವಂತೆ ಮನವಿ

ಕಲಬುರಗಿ: ಕಾಳಗಿ ತಾಲ್ಲೂಕಿನ ರಮ್ಮನಗೂಡ್ ಗ್ರಾಮ ಪಂಚಾಯತಿಯ ಎದುರುಗಡೆ ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳು ಕಲ್ಪಿಸಿವಂತೆ ಮಾದಿಗ ದಂಡೋರ ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸುಂದರ ಡಿ.ಸಾಗರ್, ಉಪಾಧ್ಯಕ್ಷ ಹಣಮಂತ ಮೇಲಿನ ಕೆರಿ, ರೈತ ಸಂಘ ಅಧ್ಯಕ್ಷ ವೀರಣ್ಣ ಗಂಗಾಣಿ, ತಾಲ್ಲೂಕು ಅಧ್ಯಕ್ಷರಾದ ಕರಣ ಜಿ ರಾಜಾಪೂರ, ಶ್ರೀಕಾಂತ ಸಜ್ಜನ್, ಅನಿಲ ಹೆಬ್ಬಾಳ,ಪೀರಪ್ಪ ಸಾಲಳ್ಳಿ,ಸುರೇಶ ಕೊಡ್ಲಿ, ಕಾಶಿನಾಥ ಮಾಸ್ಟರ, ಸಂತೋಷ ಸಾಸರಗಾಂವ, ಭೀಮ ರಟ್ಕಲ, ಪಿಂಟು ಕೊಡ್ಲಿ, ಆನಂದ ಯಲಕ್ಕಪಳ್ಳಿ, ಸುರೇಶ ಮೇಲಿನಕೇರಿ,ಚಂದ್ರಕಾಂತ ಭಾಸ್ಕರ, ಸುಭಾಷ ಮೊಘಾ, ಸೇರಿದಂತೆ ರುಮ್ಮನಗೂಡ ಗ್ರಾಮಸ್ಥರು ಉಪಸ್ಥಿತರಿದ್ದರು.
Next Story





