ಕಮಲಾಪುರ | ಬೀರಲಿಂಗೇಶ್ವರ ದೇವಸ್ಥಾನಕ್ಕೆ ಶಾಸಕ ಬಸವರಾಜ್ ಮತ್ತಿಮಡು ಅಡಿಗಲ್ಲು

ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಶನಿವಾರ ಕಮಲಾಪುರ ತಾಲೂಕಿನ ಜವಳಗಾ ಬಿ. ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಅಡಿಗಲ್ಲು ನೇರವೆರಿಸಿದರು.
ಅವರಾದಿಯ ನಿಂಗಪ್ಪ ಮುತ್ಯಾ ಅವರು ಹಾಗು ಜವಳಗಾ ಬಿ. ಗ್ರಾಮದ ಬೀರಲಿಂಗ ಮುತ್ಯಾನವರು ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಕುರುಬ ಸಮುದಾಯದ ಮುಖಂಡ ಬಸವರಾಜ್ ಮದ್ರಕಿ, ಗ್ರಾಮದ ಮುಖಂಡರಾದ ಬಸವಣ್ಣಪ್ಪಾ ಹೀರಿಪೂಜಾರಿ, ಮಾಣಿಕಪ್ಪ ಹೀರಿಪೂಜಾರಿ, ಶ್ರೀಚಂದ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಪ್ರಕಾಶ್ ಶಿಂಗೆ, ಜವಳಗಾ ಬಿ. ಗ್ರಾಮ ಪಂಚಾಯಿತಿ ಸದಸ್ಯರಾದ ಶರಣು ಸಂಗೊಳಗಿ, ಮಲ್ಲಿಕಾರ್ಜುನ್ ಹೀರಿಪೂಜಾರಿ, ಬಾಬುರಾವ್ ನಡುಮನಿ, ಮಲ್ಲಿಕಾರ್ಜುನ್ ಬಿರಾದರ್, ಸಿದ್ಧಾರೂಢ ಸಂಗೊಳಗಿ ಸೇರಿದಂತೆ ಇನ್ನಿತರ ಜವಳಗಾ. ಬಿ ಗ್ರಾಮದ ಮುಖಂಡರು ಹಾಗು ಗ್ರಾಮಸ್ಥರು ಇದ್ದರು.
Next Story





