ಗುಲಬರ್ಗಾ ವಿವಿಯಲ್ಲಿ ಕನಕ ಜಯಂತಿ ಆಚರಣೆ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ದಾಸ ಶ್ರೇಷ್ಠ ಕನಕದಾಸರ 538ನೇ ಜಯಂತ್ಯೋತ್ಸವ ಕಾರ್ಯಕ್ರಮ ಶನಿವಾರ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಚಂದ್ರಕಲಾ ಬಿದರಿ ಮಾತನಾಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಮಾತನಾಡಿ, ಹಿಂದಿನ ದಾಸರು, ಶರಣರು, ಸಂತರು ತಮ್ಮ ಜೀವನದ ಕಹಿ ಅನುಭವಗಳನ್ನು ಮುಂದಿನ ಪೀಳಿಗೆಗೆ ಕೀರ್ತನ ಹಾಗೂ ಸಾಹಿತ್ಯದ ಮೂಲಕ ಬೆಳಕು ಚೆಲ್ಲಿದ್ದಾರೆ. ಕನಕದಾಸರು ಉಡುಪಿಯ ದೇವರ ಸನ್ನಿಧಿಗೆ ಹೋದಾಗ ಅವರಿಗೆ ಧನ ಕಾಯುವವರಿಗೆ ದೇವರ ಗುಡಿಯಲ್ಲಿ ಪ್ರವೇಶವಿಲ್ಲ ಎಂದು ಅರ್ಚಕರು ಎಂದಾಗ ಕನಕದಾಸರು ಒಳಗಿನ ದೇವರು ಕೂಡಾ ಧನ ಕಾಯುವನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ರಮೇಶ್ ಲಂಡನಕರ್, ವಿದ್ಯಾವಿಷಯಕ ಪರಿಷತ್ ಸದಸ್ಯರಾದ ಪ್ರೊ. ಜಿ.ಎಂ. ವಿದ್ಯಾಸಾಗರ, ಕುಲಸಚಿವರು (ಮೌಲ್ಯಮಾಪನ) ಡಾ. ಎನ್. ಜಿ. ಕಣ್ಣೂರ, ವಿತ್ತಾಧಿಕಾರಿಗಳಾದ ಶ್ರೀಮತಿ ಜಯಾಂಬಿಕ, ಕನಕದಾಸ ಜಯಂತ್ಯೋತ್ಸವದ ಸಂಚಾಲಕರಾದ ರಿಷಿಕುಮಾರ ಎಂ. ಹೊರಕೇರಿ, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





