ಕಲಬುರಗಿ| ಕೆರೆ ಒಡೆದು ಗ್ರಾಮಕ್ಕೆ ನುಗ್ಗಿದ ನೀರು; ಸ್ಥಳಕ್ಕೆ ಅಧಿಕಾರಿಗಳ ದೌಡು

ಕಲಬುರಗಿ: ಧಾರಾಕಾರ ಮಳೆಯಿಂದಾಗಿ ಕೆರೆ ಒಡ್ಡು ಒಡೆದ ಪರಿಣಾಮ ಗ್ರಾಮದೊಳಗೆ ನೀರು ನುಗ್ಗಿರುವ ಘಟನೆ ಮಧ್ಯರಾತ್ರಿ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ನಡೆದಿದೆ.
ಅಲ್ಲಿನ ಗ್ರಾಮದ ಪಕ್ಕದಲ್ಲಿರುವ ವಪತ್ತೇಶ್ವರ ಕೆರೆಯ ಒಡೆದಿದ್ದು, ರಭಸವಾಗಿ ಹರಿದ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಪ್ರಮಾಣದ ದವಸ ಧಾನ್ಯ, ಬಟ್ಟೆ ಸೇರಿದಂತೆ ಮತ್ತಿತ್ತರ ಸಾಮಗ್ರಿಗಳಿಗೆ ಹಾನಿ ಉಂಟಾಗಿದೆ. ಸಮೀಕ್ಷೆ ಬಳಿಕ ತಕ್ಷಣದ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಳಂದ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್ ತಿಳಿಸಿದ್ದಾರೆ.
ಸ್ಥಳಕ್ಕೆ ಆಳಂದ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್, ಇಓ ಮಾನಪ್ಪ ಕಟ್ಟಿಮನಿ, ತಾಲೂಕು ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷ, ಸದಸ್ಯರು ಸೇರಿದಂತೆ ಮತ್ತಿತ್ತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





