ಕಲಬುರಗಿ| ಅಂಬೇಡ್ಕರ್ ಸೇವಾ ಸಮಿತಿಯ ಆಳಂದ ತಾಲ್ಲೂಕಾಧ್ಯಕ್ಷರಾಗಿ ಮಲ್ಲಿಕಾರ್ಜುನ್ ಶೃಂಗೇರಿ ಆಯ್ಕೆ

ಕಲಬುರಗಿ: ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ಆಳಂದ ತಾಲ್ಲೂಕಿನ ಅಧ್ಯಕ್ಷರನ್ನಾಗಿ ಕಿಣ್ಣಿ ಸುಲ್ತಾನ್ ಗ್ರಾಮದ ಮಲ್ಲಿಕಾರ್ಜುನ್ ಶೃಂಗೇರಿ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ರಾಜ್ಯಧ್ಯಕ್ಷರು ಹಾಗೂ ಸಂಸ್ಥಾಪಕರಾದ ಕೆ.ಎಂ.ಸಂದೇಶ್ ಅವರ ಆದೇಶದ ಮೇರೆಗೆ ಸಂಘಟನೆಯ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಬುದ್ದೇಶ್ ಸಿಂಗೆ ಹಾಗೂ ಕಲಬುರಗಿ ಯುವ ಘಟಕ ಅಧ್ಯಕ್ಷರಾದ ಎನ್.ಕೆ ಅರ್ಜುನ್ ಅವರು ಇಲ್ಲಿನ ಜಗತ್ ವೃತ್ತದಲ್ಲಿ ಮಲ್ಲಿಕಾರ್ಜುನ್ ಶೃಂಗೇರಿ ಅವರಿಗೆ ನೇಮಕಾತಿ ಪತ್ರ ನೀಡುವ ಮೂಲಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳು, ಇನ್ನಿತರರು ಉಪಸ್ಥಿತರಿದ್ದರು.
Next Story





