ಕಲಬುರಗಿ: ಅಪ್ರಾಪ್ತೆ ಮೇಲೆ ಅತ್ಯಾಚಾರ; ಆರೋಪಿಯ ಬಂಧನ

ಕಲಬುರಗಿ: ಯುವಕನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ಘಟನೆ ನಗರದ ಆಸ್ಪತ್ರೆಯಯೊಂದರಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಆಸ್ಪತ್ರೆಯಲ್ಲಿ ಹೌಸ್ ಕಿಪ್ಪಿಂಗ್ ಕೆಲಸ ಮಾಡುತ್ತಿದ್ದ ತಾಲೂಕಿನ ಕಲ್ಲಹಂರಗಾ ಗ್ರಾಮದ ಯುವಕ ಸಂಪತ ಕಿವಡೆಕರ್ ಬಂಧಿತ ಆರೋಪಿ.
ಬಾಲಕಿಯ ತಂದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ತಂದೆಯನ್ನು ನೋಡಿಕೊಳ್ಳಲು ಮಗಳು ಜೊತೆಯಲ್ಲಿಯೇ ಇದ್ದಳು. ಪರಿಚಯಸ್ಥ ಯುವಕ ಸಂಪತ್ ಗ್ರಾಮಕ್ಕೆ ಹೋಗಿ ಬಟ್ಟೆ ತಂದು ಕೊಡುತ್ತಿದ್ದನು. ಶನಿವಾರ ಬೆಳಗ್ಗೆ ಎಂದಿನಂತೆ ಆತ ಬಟ್ಟೆ ತಂದಿರುವೆ ಎಂದು ಬಾಲಕಿಯನ್ನು ಕರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
Next Story





