Kalaburagi | ಸೆ. 16 ರಂದು ಮಿನಿ ಉದ್ಯೋಗ ಮೇಳ

ಕಲಬುರಗಿ: ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಸೆಪ್ಟೆಂಬರ್ 16 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿಯ ಎಂ.ಎಸ್.ಕೆ. ಮಿಲ್ ರಸ್ತೆಯ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಮೂತ್ತೂಟ್ ಫೈನಾನ್ಸ್ ನಲ್ಲಿ ಇನ್‍ಟರ್ನ್ ಟ್ರೈನಿ (ಮಹಿಳಾ/ಪುರುಷ) ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 26 ವರ್ಷದೊಳಗಿರಬೇಕು.
ಕಲಬುರಗಿ ಎಸ್.ಆರ್.ಜೆ. ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‍ದಲ್ಲಿ ಫೀಲ್ಡ್ ಮಾರ್ಕೆಟಿಂಗ್ ಎಕ್ಸಿಕ್ಯೊಟಿವ್ ಹುದ್ದೆಗೆ ಎಂ.ಬಿ.ಎ. ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 35 ವರ್ಷದೊಳಗಿರಬೇಕು.
ಶ್ರೀ ಸಾಯಿ ಅರ್ಥ ಮೂವರ್ಸ್‍ದಲ್ಲಿ ಸರ್ವೀಸ್ ಇಂಜಿನಿಯರ್, ಸೇಲ್ಸ್ ಇಂಜಿನಿಯರ್, ಸಿ.ಆರ್.ಎಮ್ ಹುದ್ದೆಗೆ ಐಟಿಐ/ ಡಿಪ್ಲೋಮಾ/ ಬಿಇ (ಮೆ/ಅ.ಮೊ) ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.
ಟಿಸಿ ಮೆನ್‍ಟೆಕ್ ಸಲ್ಯೂಶನ್‍ದಲ್ಲಿ ಫೀಲ್ಡ್ ಎಕ್ಸಿಕ್ಯೊಟಿವ್, ಸೇಲ್ಸ್ ಎಕ್ಸಿಕ್ಯೊಟಿವ್, ಕ್ಯಾಶ್ ಕಲೆಕ್ಷನ್ ಎಕ್ಸಿಕ್ಯೊಟಿವ್, ಬಿಪಿಒ ಹುದ್ದೆಗೆ ಪಿಯುಸಿ / ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 48 ವರ್ಷದೊಳಗಿರಬೇಕು.
ಕ್ರೆಡಿಟ್ ಆಕ್ಸಸ್ ಗ್ರಾಮೀಣ ಲೀ.ದಲ್ಲಿ ಕ್ರೆಡಿಟ್ ಪ್ರೋಸ್ರೆಸಿಂಗ್ ಅಸೋಸಿಯೇಟ್ ಹುದ್ದೆಗೆ ಬಿ.ಕಾಂ/ಬಿ.ಎಸ್.ಸಿ/ಬಿ.ಬಿ.ಎ. ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 30 ವರ್ಷದೊಳಗಿರಬೇಕು.
ಸ್ವತಂತ್ರ ಮೈಕ್ರೊ ಫೈನಾನ್‍ದಲ್ಲಿ ಫೀಲ್ಡ್ ಆಫೀಸರ್ಸ್ / ಕಲೆಕ್ಷನ್ ಆಫೀಸರ್ ಹುದ್ದೆಗೆ ಪಿಯುಸಿ / ಐಟಿಐ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸದ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್ (ಬಯೋಡೆಟಾ), ಭಾವಚಿತ್ರಗಳು ಹಾಗೂ ಆಧಾರ್‍ಕಾರ್ಡ್‍ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಉದ್ಯೋಗಮೇಳದಲ್ಲಿ ಭಾಗವಹಿಸಬೇಕು.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846, ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.






