ಮೈಸೂರಿನಲ್ಲಿ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್ 5 ಲಕ್ಷ ರೂ. ಗಳ ಚೆಕ್ ವಿತರಣೆ

ಕಲಬುರಗಿ : ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಜೀವನೋಪಾಯಕ್ಕಾಗಿ ಬಲೂನ್ ಮಾರಲು ತೆರಳಿದ ದೌರ್ಜನ್ಯಕ್ಕೋಳಗಾಗಿ ಮೃತಪಟ್ಟಿರುವ ಸಂತ್ರಸ್ತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ. ಸರಕಾರದ ಪರಿಹಾರ ಧನದ ಚೆಕ್ ಅನ್ನು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ವಿತರಿಸಿದರು.
ಇದಕ್ಕೂ ಮುಂಚೆ ಶಾಸಕರಾದ ಅಲ್ಲಂಪ್ರಭು ಪಾಟೀಲರು ಬಾಲಕಿಯ ಸಂತ್ರಸ್ತ ಕುಟುಂಬಕ್ಕೆ ಭೇಟಿ ನೀಡಿ, ವೈಯಕ್ತಿಕವಾಗಿಯೂ ಧನ ಸಹಾಯ ಮಾಡಿ ಸಿಎಂ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ನೀಡಿರುವ ಭರವಸೆಯಂತೆಯೇ ಸಿಎಂ ಪರಿಹಾರ ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಭೀಮರಾಯ ಕೊಳ್ಳುರು, ತಹಶೀಲ್ದಾರ ಕೆ. ಆನಂದ ಶೀಲ್, ಅಣ್ಣಪ್ಪ ಕೆರಮಗಿ, ಸುನೀಲ್ ಮದನಕರ, ಶಿವಕುಮಾರ ಮಗಿ, ಆಕಾಶ, ನಾಗೇಂದ್ರಪ್ಪ ಕೋರೆ ಸೇರಿದಂತೆ ಇತರರು ಇದ್ದರು.
Next Story





