ಕಲಬುರಗಿ | ಭಕ್ತಿ ಮಾರ್ಗದಿಂದ ಭಗವಂತನನ್ನು ಒಲಿಸಿಕೊಂಡವರು ಕನಕದಾಸರು : ನಿಂಗಣ್ಣ ಹುಳಗೋಳಕರ್

ಕಲಬುರಗಿ: ಜಾತಿ, ಮತ, ಕುಲಗಳನ್ನು ಮೀರಿ ಭಕ್ತಿ ಮಾರ್ಗದಿಂದ ಭಗವಂತನನ್ನು ಒಲಿಸಿಕೊಂಡವರು ದಾಸಶ್ರೇಷ್ಠರಾದ ಕನಕದಾಸರು ಎಂದು ಬಿಜೆಪಿ ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು.
ಶನಿವಾರ ಶಹಾಬಾದ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿಂಗಣ್ಣ ಹುಳಗೋಳಕರ್, ಸಮಸಮಾಜದ ಕನಸು ಬಿತ್ತಿದ ಕನಕದಾಸರ ಜೀವನ, ಬೋಧನೆಗಳು ಮನುಕುಲದ ಹಾದಿಗೆ ಬೆಳಕಾಗಲಿ ಎಂದು ಹೇಳಿದರು.
ಈ ವೇಳೆ ಸಿದ್ರಾಮ ಕುಸಾಳೆ, ದಿನೇಶ ಗೌಳಿ, ಸದಾನಂದ ಕುಂಬಾರ, ಶಶಿಕಲಾ ಸಜ್ಜನ, ನಾರಾಯಣ ಕಂದಕೂರ, ಕಾಶಣ್ಣ ಚನ್ನೂರ, ಶಿವಕುಮಾರ ಇಂಗಿನಶೆಟ್ಟಿ, ಶಿವಗೌಡ ಪಾಟೀಲ್, ಅನೀಲಕುಮಾರ ಬೊರಗಾಂವಕರ್, ಯಲ್ಲಪ್ಪ ದಂಡಗುಲಕರ, ಡಿ.ಸಿ.ಹೊಸಮನಿ, ಬಸವರಾಜ ಸಾತ್ಯಾಳ, ಗೊವಿಂದ ಕುಸಾಳೆ, ಅಮರ ಕೊರೆ, ಉಮೇಶ್ ನಿಂಬಾಳಕರ, ರೇವಣಸಿದ್ದ ಮತ್ತಿಮಡು, ನಾಗರಾಜ ಮುದ್ನಾಳ, ಶ್ರೀನಿವಾಸ ದೇವಕರ, ಶ್ರೀನಿವಾಸ ನೆದಲಗಿ, ಸುನಿಲ್ ಪುಜಾರಿ, ಸುರೇಂದ್ರ ಗೌಳಿ, ಶ್ರೀ ನಿವಾಸ ನಾಯಕ, ನಾಗೆಶ ದೊತ್ರೆ,ಸಂತೋಷ ಹುಲಿ, ಮಾರುತಿ ಕೊರೆ ಹಾಗೂ ಇತರರು ಉಪಸ್ಥಿತರಿದ್ದರು.





