ಕಲಬುರಗಿ: ಗೋದುತಾಯಿ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಸಂಸ್ಥಾಪನಾ ದಿನಾಚರಣೆ

ಕಲಬುರಗಿ: ಇಂದಿನ ಯುವ ಪೀಳಿಗೆ ದೇಶದ ಶಕ್ತಿ ಮತ್ತು ಆಸ್ತಿಯಾಗಿದ್ದು , ಈ ಶಕ್ತಿ ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿವೇಕಾನಂದ ಇನ್ಸಿಟ್ಯೂಟ್ ಆಫ್ ಮ್ಯಾನೆಜಮೆಂಟ್‌ನ ಪ್ರಾಧ್ಯಾಪಕ ಮಹೇಶ ದೇಶಪಾಂಡೆ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಸಂಸ್ಥಾಪನಾ ದಿನಾಚರಣೆ, ತಂಬಾಕು ಮುಕ್ತ ಯುವ ಅಭಿಯಾನ ಮತ್ತು ಯುವ ಸೇವಾ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು, ಯುವಕರಲ್ಲಿ ರಾಷ್ಟçಪ್ರೇಮ, ದೇಶ ಭಕ್ತಿ ಬಿತ್ತನೆ ಬಹಳ ಅವಶ್ಯಕತೆ ಇದೆ, ಇಂದಿನ ಯುವ ಜನತೆಯಲ್ಲಿ ರಾಷ್ಟ್ರೀಯ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕಾಗಿದೆ. ಅದರ ಜೊತೆಗೆ ತಂಬಾಕು ದುಶ್ಚಟಗಳಿಗೆ ಯುವ ಜನತೆ ಬಲಿಯಾಗುತ್ತಿದ್ದಾರೆ. ಅದಕ್ಕಾಗಿ ಯುವ ಜನತೆ ಜಾಗೃತರಾಗಿರಬೇಕು ಮತ್ತು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪಾಲ್ಗೊಳ್ಳಿ ಎಂದರು.
ಇನ್ನೊರ್ವ ಮುಖ್ಯ ಅತಿಥಿ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಅಧಿಕಾರಿ ಶ್ರೀಮತಿ ಶಾಂತಾ ಪಾಟೀಲ ಮಾತನಾಡಿ, ಎನ್‌ಎಸ್‌ಎಸ್ ಬೆಳೆದು ಬಂದು ಬಗೆ ಮತ್ತು ಅದರ ಪ್ರಯೋಜನ ಕುರಿತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಪ್ರಾಧ್ಯಾಪಕಿ ಡಾ.ಸೀಮಾ ಪಾಟೀಲ, ಐಕ್ಯೂಎಸಿ ಸಂಯೋಜ ಡಾ.ಸಿದ್ಧಲಿಂಗರೆಡ್ಡಿ ವೇದಿಕೆ ಮೇಲಿದ್ದರು. ಮಹಾವಿದ್ಯಾಲಯದ ಎನ್‌ಎಸ್‌ಎಸ್ ಅಧಿಕಾರಿ ಶ್ರೀಮತಿ ಕಲ್ಪನಾ ಡಿ.ಮಹೇಂದ್ರಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ಪ್ರಾಧ್ಯಾಪಕ ಕೃಪಾಸಾಗರ ಗೊಬ್ಬುರ್ ನಿರೂಪಿಸಿ ವಂದಿಸಿದರು, ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರರು ಮತ್ತು ವಿದ್ಯಾರ್ಥಿನಿಯರು ಇದ್ದರು.







