ತುಳಜಾಪುರ ಜಾತ್ರೆಗೆ ಕಲಬುರಗಿಯಿಂದ ವಿಶೇಷ ಬಸ್‍ಗಳ ಕಾರ್ಯಾಚರಣೆ

ಕಲಬುರಗಿ: ಧಾರಾಶಿವ ಜಿಲ್ಲೆಯ ತುಳಜಾಪುರದಲ್ಲಿ ಅಕ್ಟೋಬರ್ 9ರಿಂದ 28ರವರೆಗೆ ನಡೆಯಲಿರುವ ಶ್ರೀ ತುಳಜಾ ಭವಾನಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-1ರ ವತಿಯಿಂದ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ-1 ಮತ್ತು 4, ಚಿತ್ತಾಪುರ, ಕಾಳಗಿ ಹಾಗೂ ಸೇಡಂ ಘಟಕಗಳಿಂದ ಕಲಬುರಗಿಯಿಂದ ತುಳಜಾಪುರಕ್ಕೆ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಅದೇ ರೀತಿ ಚಿಂಚೋಳಿ ತಾಲೂಕಿನ ಸಾರ್ವಜನಿಕರು ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ಚಿಂಚೋಳಿಯಿಂದ ಹುಮನಾಬಾದ್ ಮಾರ್ಗವಾಗಿ ತುಳಜಾಪುರಕ್ಕೆ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ವಿಶೇಷ ಸಾರಿಗೆ ಸೌಲಭ್ಯದ ಕುರಿತು ಮಾಹಿತಿಗಾಗಿ ಸಂಬಂಧಿಸಿದ ಘಟಕ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದಾಗಿದೆ. ಕಲಬುರಗಿ ಘಟಕ-1ರ ಘಟಕ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ 7760992113, ಕಲಬುರಗಿ ಘಟಕ-4ರ ಘಟಕ ವ್ಯವಸ್ಥಾಪಕರ ಸಂಖ್ಯೆ 7022012103, ಚಿಂಚೋಳಿ ಘಟಕದ ಘಟಕ ವ್ಯವಸ್ಥಾಪಕರ ಸಂಖ್ಯೆ 7760992117, ಚಿತ್ತಾಪುರ ಘಟಕದ ಘಟಕ ವ್ಯವಸ್ಥಾಪಕರ ಸಂಖ್ಯೆ 7760992119, ಕಾಳಗಿ ಘಟಕದ ಘಟಕ ವ್ಯವಸ್ಥಾಪಕರ ಸಂಖ್ಯೆ 7760992120 ಹಾಗೂ ಸೇಡಂ ಘಟಕದ ಘಟಕ ವ್ಯವಸ್ಥಾಪಕರ ಸಂಖ್ಯೆ 7760992466 ಆಗಿದೆ.
ಮೇಲ್ಕಂಡ ಘಟಕಗಳ ವ್ಯಾಪ್ತಿಗೆ ಬರುವ ಬಸ್ ನಿಲ್ದಾಣಗಳು ಹಾಗೂ ಗ್ರಾಮಗಳಿಂದ 40ರಿಂದ 45 ಜನ ಪ್ರಯಾಣಿಕರು ಇದ್ದಲ್ಲಿ, ಆಯಾ ಬಸ್ ನಿಲ್ದಾಣ ಅಥವಾ ಗ್ರಾಮದಿಂದಲೇ ತುಳಜಾಪುರಕ್ಕೆ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು. ಸಾರ್ವಜನಿಕ ಪ್ರಯಾಣಿಕರು ಹಾಗೂ ಭಕ್ತಾದಿಗಳು ಈ ವಿಶೇಷ ಸಾರಿಗೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.






