ಕಲಬುರಗಿ| ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸಲು ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದು ಖಂಡನೀಯ : ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ

ಕಲಬುರಗಿ: ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದು ಒತ್ತಾಯಿಸಿರುವುದು ಖಂಡನೀಯ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅಶೋಕ್ ಬಗಲಿ, ಆರೆಸ್ಸೆಸ್ ಶತಮಾನೋತ್ಸವ ಸಂಭ್ರಮದ ನಿಮಿತ್ತ ರಾಜ್ಯಾದ್ಯಂತ ಗಣವೇಷಧಾರಿಗಳು ರವಿವಾರ ಪಥಸಂಚಲನ ನಡೆಸಿದ ಸಂದರ್ಭದಲ್ಲೇ ಸಂಘಕ್ಕೆ ನಿರ್ಬಂಧ ಹಾಕಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ವಿಷಾದನೀಯ ಸಂಗತಿ, ಇದನ್ನು ಜಿಲ್ಲಾ ಬಿಜೆಪಿ ಘಟಕ ಉಗ್ರವಾಗಿ ಖಂಡಿಸುತ್ತದೆ ಎಂದರು.
ಆರೆಸ್ಸೆಸ್ ವಿಚಾರಧಾರೆಗಳನ್ನು ತಿಳಿದುಕೊಂಡು ಸಿಎಂ ಅವರಿಗೆ ಪತ್ರ ಬರೆಯಬೇಕಾಗಿತ್ತು. ಆದರೆ ಸಂಘಟನೆ ನಿಷೇಧಿಸಬೇಕೆಂಬ ನಿಮ್ಮ ನಿಲುವು ಸರಿಯಾದುದಲ್ಲ. ಕೂಡಲೇ ನಿಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಡಿನ ಜನತೆಗೆ ಕ್ಷಮೆಯಾಚಿಸಬೇಕೆಂದು ಅಶೋಕ್ ಬಗಲಿ ಒತ್ತಾಯಿಸಿದ್ದಾರೆ.
Next Story





