ಕಲಬುರಗಿ | ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಪ್ರಾದೇಶಿಕ ಆಯುಕ್ತೆ ಝಹೀರಾ ನಸ್ಸಿಮ್

ಕಲಬುರಗಿ: ಭೀಮಾ ಪ್ರವಾಹದಿಂದ ತತ್ತರಿಸಿರುವ ಕಲಬುರಗಿ ತಾಲೂಕಿನ ಫರತಾಬಾದ, ಸರಡಗಿ ಗ್ರಾಮಕ್ಕೆ ರವಿವಾರ ಪ್ರಾದೇಶಿಕ ಆಯುಕ್ತ ಝಹೀರಾ ನಸ್ಸಿಮ್ ಭೇಟಿ ನೀಡಿ ಪರಿಶೀಲಿಸಿದರು.
ತಹಶೀಲ್ದಾರ ಕೆ.ಅನಂದಶೀಲ ಅವರಿಂದ ಸಂತ್ರಸ್ತರ ಸ್ಥಳಾಂತರ, ಕಾಳಜಿ ಕೇಂದ್ರ ಸೇರಿದಂತೆ ಇನ್ನಿತರೆ ಮಾಹಿತಿ ಪಡೆದ ಅವರು, ಯಾವುದೇ ಮಾನವ ಹಾನಿಯಾಗದಂತೆ ಅಧಿಕಾರಿಗಳು ಸ್ಥಳದಲ್ಲಿದ್ದು, ಜನರನ್ನು ಸಂರಕ್ಷಿಸಬೇಕು ಎಂದರು.
ಇದಲ್ಲದೆ ಕೂಡಿಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿದ ಪ್ರಾದೇಶಿಕ ಆಯುಕ್ತರು, ಸಂತ್ರಸ್ತರಿಗೆ ಗುಣಮಟ್ಟದ ಊಟೋಪಚಾರದ ವ್ಯವಸ್ಥೆ ಮಾಡಬೇಕು. ನಿರಂತರವಾಗಿ ಅರೋಗ್ಯ ತಪಾಸಣೆ ಮಾಡಬೇಕು. ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಎಲ್ಲಾ ರೀತಿಯ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
Next Story







