ಶಿಲ್ಪ ಕಲಾವಿದ ಆನಂದ್ ಬಾಬು ಅವರಿಗೆ ರಾಷ್ಟ್ರೀಯ ಪ್ರಶಸ್ತಿ

ಕಲಬುರಗಿ: ಕಲಬುರಗಿ ಮೂಲದ ಶಿಲ್ಪ ಕಲಾವಿದ ಆನಂದ್ ಬಾಬು ಮನೋಹರ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2024ರ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು.
ಡಿಸೆಂಬರ್ 9ರಂದು ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಆನಂದ ಬಾಬು ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಅನಂದ್ ಬಾಬು ಅವರು ಕಳೆದ ದಶಕದಿಂದ ಕೈಗಾರಿಕೆ ಸೇವಾ ಕೇಂದ್ರ (ಅಭಿವೃದ್ಧಿ ಆಯುಕ್ತರ ಕಚೇರಿ) ಜತೆ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಶಿಲ್ಪ ವಿನ್ಯಾಸದಲ್ಲಿ ಮಾಡಿರುವ ಕೆಲಸವನ್ನು ಪರಿಗಣಿಸಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ.
Next Story





