ಸೇಡಂ | ಸಿಜೆಐ ಗವಾಯಿ ಮೇಲೆ ಶೂ ಎಸೆದ ಕಿಶೋರ್ ವಕೀಲನ ವಿರುದ್ಧ ಕಠಿಣ ಶಿಕ್ಷೆಗೆ ಬಹುಜನ ಸಮಾಜ ಪಕ್ಷ ಆಗ್ರಹ

ಕಲಬುರಗಿ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ಕಿಶೋರ್ ರಾಕೇಶ್ ವಕೀಲನಿಗೆ ಕಠಿಣ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ಸೇಡಂ ಪಟ್ಟಣದಲ್ಲಿ ಬುಧವಾರ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬೌದ್ಧ ಎಸ್.ಸಿ ಮೂಲದ ವ್ಯಕ್ತಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿರುವ ಬಗ್ಗೆ ಸಹಿಸದೆ ಜಾತಿವಾದಿಯಾಗಿರುವ ಮನುವಾದಿ ಆರೋಪಿ ಕಿಶೋರ್ ರಾಕೇಶ್ ವಕೀಲನ ಕೃತ್ಯಕ್ಕೆ ವಕೀಲ ವೃತ್ತಿ ರದ್ದುಪಡಿಸಿ, ಅವರ ವಿರುದ್ಧ ಕೂಡಲೇ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಬಹುಜನ ಸಮಾಜ ಪಕ್ಷದಿಂದ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ಎಸ್ ಸಿಂದೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಮಚಂದ್ರ ಗುತ್ತೇದಾರ್, ರಾಮು, ಇಂಜೆಳ್ಳಿಕರ್ ಸಿದ್ದು ದೊರೆ, ಕೃಷ್ಣ ಟೈಗಾರ, ಜಗದೀಶ ಇಮಾಡಪೂರ ಶಿವು ನಾಮವಾರ್, ಶ್ಯಾಮ್ ಗುಂಡೇಪಲ್ಲಿ, ಪ್ರದೀಪ ಸಿಂಧೆ, ಸಂದೀಪ ಸೇರಿದಂತೆ ಮತ್ತಿತರರು ಇದ್ದರು.





