ಸೇಡಂ | ಧಾರಾಕಾರ ಮಳೆಯಿಂದ ಹೆಸರು, ಉದ್ದು ಬೆಳೆ ನಾಶ : ರೈತರು ಕಂಗಾಲು

ಕಲಬುರಗಿ: ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಸೇಡಂ ತಾಲೂಕಿನಾದ್ಯಂತ ರೈತರ ಜಮಿನಿನಲ್ಲಿ ನೀರು ನುಗ್ಗಿ ಹೆಸರು ಹಾಗೂ ಉದ್ದು ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರು ವರದಾ ಸ್ವಾಮಿ ಹಿರೇಮಠ ಅವರು ಒತ್ತಾಯಿಸಿದ್ದಾರೆ.
ವಿಪರೀತ ಮಳೆಯಿಂದ ರೈತರು ಜಮಿನಿನಲ್ಲಿ ಹೆಸರು ಹಾಗೂ ಉದ್ದು ಬೆಳೆಗಳು ಮೊಳಕೆಯೊಡೆಯುತ್ತಿವೆ, ಕೆಲವು ಬೆಳೆಗಳು ಭೂಮಿ ಮೇಲೆ ಉರುಳಿ ನಾಶವಾಗುತ್ತಿವೆ, ತೊಗರಿ ಬೆಳೆಗಳು ನೆಟೆ ಸುತ್ತು ಹೋಗಿ ರೈತರ ಜಮೀನುಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಸೇಡಂ ತಹಶೀಲ್ದಾರ್ ಶ್ರೀಯಾಂಕ್ ಧನಶ್ರೀ ಅವರಿಗೆ ಮನವಿ ಸಲ್ಲಿಸಿ, ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಅಶೋಕ್ ಮಡಿವಾಳ ಕೋತ್ತಪಲ್ಲಿ, ಬಾಲರಾಜ್ ಕಾಲಲ್, ವೆಂಕಟಪ್ಪ, ವೀರೇಶ ಅವಂಟಿ, ನರಸಿಂಹಲು ಕಿಷ್ಣಪುರ, ಚೆನ್ನಪ್ಪ, ವೇಂಕಟಪ್ಪ, ಶ್ರೀನಿವಾಸ ಕಾಕಲ್, ಭೀಮಪ್ಪ, ಬಂಟ್ಲು ಬಸವರಾಜ, ಕಾಶಪ್ಪ, ಶೇಖರ್ ಸೇರಿದಂತೆ ಇನ್ನಿತರರು ಇದ್ದರು.





