ಸೇಡಂ | ಫುಲೆ ದಂಪತಿ ಪ್ರಶಸ್ತಿ ಪುರಸ್ಕೃತರಿಗೆ ಶಾಲಾ ಶಿಕ್ಷಕರಿಂದ ಸನ್ಮಾನ

ಸೇಡಂ : ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತ್ಯುತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಾಲೂಕು ಮಟ್ಟದ ಸಾಧಕರಿಗೆ ನೀಡಲಾಗುವ ಮಾತೆ ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಬಾ ಫುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ತಾಲೂಕು ಮಟ್ಟದ ಪ್ರಶಸ್ತಿಗೆ ಭಾಜನರಾದ ಸಂಪನ್ಮೂಲ ಅಧಿಕಾರಿ (ಸಿಆರ್‌ಪಿ) ರಾಜಶೇಖರ್ ಟೈಗರ್ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಚಂದುಬಾಯಿ ಕುಲಕರ್ಣಿ ಅವರನ್ನು ಶಾಲಾ ಶಿಕ್ಷಕರು ಶಾಲು ಹೊದಿಸಿ, ಹಾರ ಹಾಕಿ ಗೌರವಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಶಿಕ್ಷಕ ಮಹಾಂತೇಶ ಪಾಟೀಲ್, ತಾಲೂಕು ಮಟ್ಟದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಲಭಿಸಿರುವುದು ಅಪಾರ ಸಂತೋಷ ತಂದಿದೆ ಎಂದು ಹೇಳಿದರು.
ಅಕ್ಷರದ ಅವ್ವೆಂದು ಖ್ಯಾತರಾದ ಸಾವಿತ್ರಿಬಾಯಿ ಫುಲೆ ಅವರು ಅವಮಾನ, ಅಪಮಾನಗಳನ್ನು ಸಹಿಸಿ ಮಹಿಳಾ ಶಿಕ್ಷಣಕ್ಕಾಗಿ ದಿಟ್ಟ ನಿರ್ಧಾರಗಳೊಂದಿಗೆ ಕ್ರಾಂತಿಕಾರಿ ಹೋರಾಟ ನಡೆಸಿದ ಪರಿಣಾಮವೇ ಇಂದು ಮಹಿಳೆಯರು ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗೂಳಾಯ್ಯ, ಮಹಾದೇವಪ್ಪ, ಶ್ರೀಕಾಂತ್, ಶಿವಲೀಲಾ, ಸಿದ್ದಮ್ಮ, ನೀತಾ ಕುಲಕರ್ಣಿ, ಸರಿತಾ, ಗೀತಾ, ಶಿಲ್ಪರಾಣಿ, ಶಾಂತಾ, ಅತಿಥಿ ಶಿಕ್ಷಕರಾದ ಜ್ಯೋತಿ, ಅರ್ಚನಾ ಮಸ್ತಿ, ರೇಣುಕಾ, ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.







