ಸೇಡಂ | ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆತ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ಆರೋಪಿ ವಕೀಲ ರಾಕೇಶ್ ಕಿಶೋರ್ ಮೇಲೆ ಕಠಿಣ ಶಿಕ್ಷೆ ಗುರಿಪಡಿಸುವಂತೆ ಆಗ್ರಹಿಸಿ, ದಲಿತ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸೇಡಂ ತಹಶೀಲ್ದಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಆರೋಪಿ ವಕೀಲನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಗುರಿ ಪಡಿಸುವಂತೆ ಆಗ್ರಹಿಸಿ ರಿಬ್ಬನಪಲ್ಲಿ ಹೈವೆ ರಸ್ತೆ ಬಂದ್ ಮಾಡಿ ಟೈಯರಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ದೇಶ ದ್ರೋಹಿ ವಕೀಲನನ್ನು ಗಲ್ಲಿಗೇರಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಾಗಿದೆ, ವಕೀಲನ ಕೃತ್ಯದ ಹಿಂದೆ ಕಾಣದ ಕೈಗಳಿವೆ, ಅವುಗಳನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿದರು.
ಸಿಜೆಐ ಅವರಿಗೆ ಅಪಮಾನ ಮಾಡಿದ ವಕೀಲನ ವಿರುದ್ಧ ಕಠಿಣ ಶಿಕ್ಷೆ ಆಗಬೇಕು, ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ದಲಿತ ಸೇನೆ ಅಧ್ಯಕ್ಷ ಭಗವಾನ್ ಬೋಚಿನ್, ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷರಾದ ಅರ್ಜುನ, ಪ್ರಶಾಂತ್ ದೊಡ್ಡಮನಿ, ಮೊಲನ ಮುಜ್ವಾರ್, ಹಜು ಬಾಯಿ ರಂಜೋಳ, ಅನ್ನೋ ಖಾನ್, ಮಾಂತೇಶ್ ಸರಡಗಿ, ಅಬ್ರಾರ್ಖಾನ್, ರಾಕೇಶ್ ಮ್ಯಾಳಗಿ, ಸಾಗರ್ ಸಂಗಾವಿ, ಗಣೇಶ್ ದಿಗ್ಗಾವ್, ಕೃಷ್ಣ ಸಂಗಾವಿ, ದೇವು ತೊಟ್ನಳ್ಳಿ, ರವಿಕುಮಾರ್ ಮ್ಯಾಳಗಿ, ರವಿಕುಮಾರ್ ಬಾಗೋಡಿ, ದರ್ಶನ್ ಲಿಂಗಮರಿ, ದರ್ಶನ್ ತಾಡಪಳ್ಳಿ, ರಾಕೇಶ್ ಬೂಚಿನ್, ಭರತ್ ಲಿಂಗಮರಿ ಮತ್ತಿತ್ತರರು ಇದ್ದರು.







