ಸೇಡಂ | ಬಕ್ರೀದ್ ಹಬ್ಬ ಆಚರಣೆ : ಪೊಲೀಸರಿಂದ ಶಾಂತಿ ಸಭೆ

ಸೇಡಂ: ಶಾಂತಿ ಸೌಹಾರ್ದತೆ ಯಿಂದ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಆಚರಣಿ ಮಾಡಬೇಕು ಎಂದು ಚಿಂಚೋಳಿ ಡಿವೈಎಸ್ಪಿ ಸಂಗಮನಾಥ ಹಿರೇಮಠ ಅವರು ಹೇಳಿದರು.
ನಗರದ ಪೊಲೀಸ್ ಠಾಣೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬಕ್ರೀದ್ ಹಬ್ಬದ ಶಾಂತಿ ಸಭೆ ನಡೆಸಿ ಮಾತನಾಡಿದ ಅವರು, ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆ ಯಿಂದ ಆಚರಣೆ ಮಾಡಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ನಿಯಮ ಪಾಲಿಸದೆ ಯುವಕರು ಬೈಕ್ ಅಡ್ಡಾದಿಡ್ಡಿ ಸಂಚಾರ ನಡೆಸಿ , ಕಾನೂನು ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಮಹಾದೇವ ದಿಡಿಮನಿ, ಉಪೇಂದ್ರಕುಮಾರ , ಮಳಖೇಡ ಕ್ರೈಂ ಪಿಎಸ್ಐ ಶರಣಪ್ಪ ಜಾಕನಳ್ಳಿ, ಎಎಸ್ ಐ ನಿಂಗಪ್ಪ ಇಟಗಿ, ಪಿಸಿ ಬಾಲಕೃಷ್ಣ ಸೇರಿದಂತೆ ಮುಸ್ಲಿಂ, ಹಿಂದೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
Next Story




