ಶಹಾಬಾದ್ | ಕನ್ನಡ ಭಾಷೆ, ಕಲೆ, ಸಾಹಿತ್ಯದ ಬೆಳವಣಿಗೆಗೆ ಗಿರಿಸಿರಿ ಸಂಸ್ಥೆ ಕೊಡುಗೆ ನೀಡುತ್ತಿದೆ : ಮರಿಯಪ್ಪ ಹಳ್ಳಿ

ಶಹಾಬಾದ್: ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ ಹಾಗೂ ನಾಟ್ಯಕಲೆಗೆ ಕಳೆದ ಮೂರು ವರ್ಷಗಳಿಂದ ಗಿರಿಸಿರಿ ಸಂಸ್ಥೆ ಪ್ರೇರಣೆ ನೀಡುತ್ತಿದ್ದು, ಈ ಮೂಲಕ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ ಎಂದು ದಸಂಸ ರಾಜ್ಯ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.
ನಗರದ ಶ್ರೀ ಜಗದಂಬಾ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಗಿರಿಸಿರಿ ಸಾಂಸ್ಕೃತಿಕ ಕಲಾ ಸಂಸ್ಥೆಯ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ 71ನೇ ರಾಜ್ಯೋತ್ಸವ ಸಂಭ್ರಮ, 2026ನೇ ಸಾಲಿನ ಸಂಗೀತ ಕಲಾ ಸಂಭ್ರಮ ಹಾಗೂ ಗಿರಿಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ನಾಡಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದು, ಈ ಮೂಲಕ ಕನ್ನಡ ನುಡಿ, ಭಾಷೆ, ಕಲೆ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ರಮೇಶ ಭಟ್ಟ ಮಾತನಾಡಿ, ಸಂಸ್ಥೆಯ ಧ್ಯೇಯವಾಕ್ಯವಾದ “ನೂರು ಕಲೆ ಒಂದೇ ಭಾವ ಸಮ್ಮೀಲನ” ಎಂಬ ಆಶಯದಂತೆ ಸಂಸ್ಥೆಯ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಹೇಳಿದರು.
ದಸಂಸ ರಾಜ್ಯ ಸಂಚಾಲಕ ಸುರೇಶ ಮೆಂಗನ್ ಮಾತನಾಡಿದರು. ಕಲಬುರಗಿ ಜಿಮ್ಸ್‌ನ ಮನೋವಿಜ್ಞಾನಿ ಡಾ. ಕೇದರನಾಥ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ನಿಂಗಣ್ಣ ಹುಳಗೋಳ, ಪ್ರಾಚಾರ್ಯ ಬಾಲರಾಜ ಮಾಚನೂರ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ, ಸಮಾಜ ಕಲ್ಯಾಣ ಇಲಾಖೆಯ ಶಕುಂತಲಾ ಸಾಕ್ರೆ, ಕಲಾವಿದ ಶಂಕರ ಜಾನಾ, ಡಾ. ಅಹ್ಮದ ಪಟೇಲ, ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಭೀಮಯ್ಯ ಗುತ್ತೇದಾರ ಹಾಗೂ ಅಶೋಕ ಯಾದಗಿರಿ ಉಪಸ್ಥಿತರಿದ್ದರು.
ಪ್ರವೀಣ ರಾಜನ್ ನಿರೂಪಿಸಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮರಲಿಂಗ ಯಾದಗಿರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದುರ್ಗಪ್ಪ ಪೂಜಾರಿ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ಅನೀಲಕುಮಾರ ಮೈನಾಳಕರ ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ನೃತ್ಯ, ಭಜನಾ ತಂಡಗಳಿಂದ ಭಜನೆ ಹಾಗೂ ಡಿ. ಸ್ಪೀರಿಟ್ ಸಂಸ್ಥೆಯಿಂದ ನೃತ್ಯ ಪ್ರದರ್ಶನಗಳು ನಡೆದವು. ಇದೇ ಸಂದರ್ಭದಲ್ಲಿ ಆನಂದ ಪಾಟೀಲ, ಅಶೋಕ ಪೂಜಾರಿ, ಮಾರ್ಥಂಡ ಜೀವಣಗಿ, ಶಿವಯೋಗಿ ಜಾನಾ, ರಾಜಶೇಖರ ದೇವರಮನಿ, ವಿಶ್ವರಾಧ್ಯ ಕಟ್ಟಿ, ಸದಾಶಿವ ಪೋತನಕರ್, ಇಮಾನ್ಯುವಲ್ ಡೇವಿಡ್, ರವೀಂದ್ರ ಭಟವಾಲ್, ಹಣಮಂತ ಲಾಸಂಗೆ ಹಾಗೂ ಶಿವಲಿಂಗಪ್ಪ ಹೆಬ್ಬಾಳ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.






