ಶಹಾಬಾದ್ | ಸರಕಾರಿ ನೌಕರರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ಶಹಾಬಾದ್ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮುದ್ರಿಸಿರುವ 2026ರ ನೂತನ ವರ್ಷದ ಕ್ಯಾಲೆಂಡರ್‌ನ್ನು ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ತಹಶೀಲ್ದಾರ್ ನೀಲಪ್ರಭಾ ಬಬಲಾದ ಅವರು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.
ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್ ಅವರು ಮಾತನಾಡಿ, ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು 2026ನೇ ಸಾಲಿನ ಆಕರ್ಷಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದ್ದು, ರಾಜ್ಯದ ಸುಮಾರು 6 ಲಕ್ಷ ನೌಕರರಿಗೆ ಉಚಿತವಾಗಿ ವಿತರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಿಡುಗಡೆಯಾದ ಈ ಕ್ಯಾಲೆಂಡರ್ ಸರ್ಕಾರಿ ಯೋಜನೆಗಳು, ಜವಾಬ್ದಾರಿಗಳ ಕುರಿತು ಮಾಹಿತಿ ನೀಡುತ್ತದೆ ಎಂದರು.
ತಹಶೀಲ್ದಾರ್ ನೀಲಪ್ರಭಾ ಬಬಲಾದ ಮಾತನಾಡಿ, ಈ ಕ್ಯಾಲೆಂಡರ್ ಕೇವಲ ದಿನಾಂಕಗಳನ್ನು ಹೊಂದಿಲ್ಲದೆ, ಸರ್ಕಾರದ ಯೋಜನೆಗಳು, ನೌಕರರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವ ಕ್ಯಾಲೆಂಡರ್ ಆಗಿದೆ. ದೇಶದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ನೌಕರರಿಗೆ ಉಚಿತ ಕ್ಯಾಲೆಂಡರ್ ವಿತರಿಸುತ್ತಿರುವ ಮೊದಲ ಸಂಘ ಎಂಬ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪಾತ್ರವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ, ರವಿಕುಮಾರ ಮುತ್ತಗಿಕರ್, ಅಣ್ಣಾರಾವ, ಗಫರ್, ಮುನೀರ್, ಶಕುಂತಲಾ ಸಾಕ್ರೆ, ಕಲಾವತಿ, ವಿಠಾಬಾಯಿ, ಸುಲೋಚನಾ ಜಾಧವ, ಸುಶೀಲ, ಶಶಿಕಾಂತ, ನರಸಪ್ಪ, ನಝೀರ್, ಹಬೀಬ್, ಯುಸೂಫ್ ನಾಕೇದಾರ, ಮುಹಮ್ಮದ್ ಖಾದ್ರಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.







