ಶಹಾಬಾದ್ | ದೇಶದ ರೈತರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ : ವಿನೋದ ಪೊದ್ದಾರ

ಶಹಾಬಾದ: ರೈತ ಮತ್ತು ಸೈನಿಕರು ದೇಶದ ಬೆನ್ನೆಲುಬಾಗಿದ್ದು, ಅವರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಎಸ್‌ಬಿಐ ಕ್ಷೇತ್ರಾಧಿಕಾರಿ ವಿನೋದ ಪೊದ್ದಾರ ಹೇಳಿದರು.
ಅವರು ಹೊನಗುಂಟಾ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿಸಲಾದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ರೈತರನ್ನು ಗೌರವಿಸಿ ಮಾತನಾಡಿದರು.
ರೈತ ಬೆಳೆದರೆ ಮಾತ್ರ ಭೂಮಿಯ ಮೇಲಿರುವ ಎಲ್ಲರಿಗೂ ಆಹಾರ. ಅವರನ್ನು ನಾವು ದೇವರಂತೆ ಕಾಣಬೇಕು. ಆದರೆ ಇಂದು ಕೃಷಿ ಸಮಾಜವನ್ನು ಅತ್ಯಂತ ನಿಕೃಷ್ಠ ಭಾವನೆಯಿಂದ ಕಾಣುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಅಲ್ಲದೇ ಇದೊಂದು ಆತಂಕಕಾರಿ ಸಂದೇಶವಾಗಿದೆ. ಅನ್ನ ನೀಡುವ ರೈತ ನಮ್ಮ ಪಾಲಿಗೆ ದೇವರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ತಿನ್ನುವ ಒಂದೊಂದು ಅಗಳಿನಲ್ಲಿ ಅವರ ಶ್ರಮವಿದೆ. ಅದು ರೈತ ನಮಗೆ ಕೊಟ್ಟ ಬಿಕ್ಷೆ ಎಂಬುದನ್ನು ಯಾರು ಮರೆಯಕೂಡದು. ಅವರನ್ನು ಗೌರವಿಸುವುದು ನಮ್ಮ ಭಾಗ್ಯ ಎಂದು ಹೇಳಿದರು.
ರವಿಕುಮಾರ ಅಲ್ಲಂಶೆಟ್ಟಿ ಮಾತನಾಡಿದರು.
ಸಿದ್ದು ವಾರಕರ್, ಸಂಗಣ್ಣ ಇಜೇರಿ, ಮಾರ್ತಂಡ ಬುರ್ಲಿ, ಲಕ್ಷ್ಮಣ್ ಕೊಡಸಾ, ರಾಮಲಿಂಗ ಗುಡೂರ,ರಾಮು ಬಂಗಿ, ಬಸಲಿಂಗ, ನಾಗರಾಜ ಕುಂಬಾರ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.





