ಶಹಾಬಾದ್ | ಸೇವಾಲಾಲ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ-ಗೌರವಾಧ್ಯಕ್ಷರ ಆಯ್ಕೆ

ಶಹಾಬಾದ್: ತಾಲೂಕಿನ ಭಂಕೂರ ಗ್ರಾಮದಲ್ಲಿ ಶಹಾಬಾದ್ ಗ್ರಾಮೀಣ ಬಂಜಾರಾ ಸೇವಾ ಸಂಘ ನೇತೃತ್ವದಲ್ಲಿ ಸಂತ ಸೇವಾಲಾಲ ಮಹಾರಾಜರ ಜಯಂತಿ ಕಾರ್ಯಕ್ರಮದ ಕುರಿತು ಪೂರ್ವ ಭಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಜಯಂತ್ಯೋತ್ಸವ ಸಮಿತಿಯ ಅಧಕ್ಯರಾಗಿ ರಾಜು ಪವಾರ್ ಹಾಗೂ ಗೌರವ ಅಧ್ಯಕ್ಷರಾಗಿ ಗೋಪಾಲ ರಾಠೋಡ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೋಪಾಲ ರಾಠೋಡ, ಜಯಂತಿ ಕಾರ್ಯಕ್ರಮಗಳು ಕೇವಲ ಕಾಟಾಚಾರಕ್ಕೆ ಆಯೋಜಿಸದೇ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲಾ ಬಂಜಾರಾ ಸಮಾಜದ ಮುಖಂಡರು ಸಲಹೆ ಸೂಚನೆಗಳನ್ನು ನೀಡಬೇಕು. ಡಿಜೆ ಹಚ್ಚಿ ಕುಣಿಯುವುದು, ಮೆರವಣಿಗೆ ಹಾಗೂ ವೇದಿಕೆಯ ಕಾರ್ಯಕ್ರಮದ ಜತೆಗೆ ಸಮಾಜಕ್ಕೆ ಮಾದರಿಯಾಗುವ ಕೆಲಸ ನಾವೆಲ್ಲರೂ ಮಾಡಬೇಕಲ್ಲದೇ ಸಂತ ಸೇವಾಲಾಲರು ನೀಡಿ ಹೋದ ತತ್ವಗಳನ್ನು ಕನಿಷ್ಠಮಟ್ಟದಲ್ಲಾದರೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಗತರಾಗೋಣ ಎಂದರು.
ಸಭೆಯಲ್ಲಿ ಸಮಾಜದ ಮುಖಂಡರಾದ ನಾರಾಯಣ ರಾಠೋಡ , ಮಾಜಿ ಜಿಪಂ ಸದಸ್ಯ ಅರವಿಂದ್ ಚವ್ಹಾಣ, ಬಂಜಾರ ಸಮಾಜ ಅಧ್ಯಕ್ಷರ ರಾಜು ಚವ್ಹಾಣ ಹಾಗೂ ಗೌರವ ಅಧ್ಯಕ್ಷ ಗಂಗಾರಾಮ ರಾಠೋಡ, ಗಣೇಶ ಪವಾರ್, ದೇವರಾಜ್ ರಾಠೋಡ್ , ರಾಜು ರಾಠೋಡ್, ಕಿಶನ್ ಚವಾಣ್, ಶಂಕರ ಪವಾರ್ ಮತ್ತು ಸಮಾಜದ ಮುಖಂಡರು ಪಾಲ್ಗೊಂಡಿದ್ದರು.





