ಶಹಾಬಾದ್ | ಶಿಕ್ಷಕರ ಸಂಘದ ಚುನಾವಣೆ : 2ನೇ ಬಾರಿ ಅಧ್ಯಕ್ಷರಾಗಿ ಶಿವಪುತ್ರ ಕರಣಿಕ ಅವಿರೋಧ ಆಯ್ಕೆ

ಶಹಾಬಾದ್: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳ ಚುನಾವಣೆಯಲ್ಲಿ ಎಲ್ಲಾ ಹುದ್ದೆಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ತಾಲ್ಲೂಕು ಚುನಾವಣಾಧಿಕಾರಿ ನಾಗೇಂದ್ರ ಬೇಲೂರ ತಿಳಿಸಿದ್ದಾರೆ.
ತಾಲ್ಲೂಕು ಅಧ್ಯಕ್ಷರಾಗಿ ಶಿವಪುತ್ರ ಕರಣಿಕ ಅವರು ಸತತ 2ನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಶಿಕ್ಷಕರ ವಲಯದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಲಲಿತಾಬಾಯಿ, ಉಪಾಧ್ಯಕ್ಷರಾಗಿ ರಝೀಯಾ ಬೇಗಂ ಹಾಗೂ ಖಜಾಂಚಿಯಾಗಿ ರವಿಕುಮಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನವ ಆಯ್ಕೆಯಾದ ಪದಾಧಿಕಾರಿಗಳನ್ನು ಶಿಕ್ಷಕರು ಹಾಗೂ ಸಂಘದ ಸದಸ್ಯರು ಅಭಿನಂದಿಸಿ, ಸಂಘದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸುವಂತೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಹಾಜಪ್ಪ ಬಿಳಾರ, ಟಿಆರ್‌ಒ ಗಿರಿಮಲ್ಲಪ್ಪ ವಳಸಂಗ, ಎಟಿಆರ್‌ಒ ಧಾನಯ್ಯ ಮಠ, ಮತಗಟ್ಟೆ ಏಜೆಂಟರಾದ ಶಿವಲಿಂಗಪ್ಪ ಹೆಬ್ಬಾಳಕರ, ಸುಭಾಷ ಸಾಕ್ರೆ ಹಾಗೂ ಹರೀಶ ಕರಣಿಕ ಉಪಸ್ಥಿತರಿದ್ದರು.
Next Story




