ಸಮ ಸಮಾಜ ನಿರ್ಮಿಸುವುದು ಶರಣರ ಮುಖ್ಯ ಆಶಯವಾಗಿತ್ತು: ಶಾಸಕ ಬಿ.ಆರ್.ಪಾಟೀಲ್

ಕಲಬುರಗಿ : ಜಾತಿ, ಲಿಂಗ, ವರ್ಗ ಹಾಗೂ ಕಾಯಕದಲ್ಲಿನ ತಾರತಮ್ಯ ಹೋಗಲಾಡಿಸಿ ಸಮಾನತೆ ಸಮಾಜ ಕಟ್ಟುವುದು ಶರಣರ ಮುಖ್ಯ ಆಶಯವಾಗಿತ್ತು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ಶಾಸಕ ಬಿ.ಆರ್.ಪಾಟೀಲ್ ಅಭಿಪ್ರಾಯಪಟ್ಟರು.
ಆಳಂದ ಪಟ್ಟಣದ ಶರಣ ಏಕಾಂತರಾಮಯ್ಯ ಅನುಭವ ಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಆಯೋಜಿಸಿದ ಶ್ರಾವಣಸಂಜೆ ಉಪನ್ಯಾಸದ ಸಮಾರೋಪದಲ್ಲಿ ಮಾತನಾಡಿದರು.
ನಮ್ಮ ಇಂದಿನ ಸಂವಿಧಾನಕ್ಕೆ ಶರಣರ ಚಿಂತನೆಗಳು, ವಚನ ಸಾಹಿತ್ಯವು ಬುನಾದಿಯಾಗಿದೆ. ಶರಣರು ಮಾನವೀಯತೆ ಮತ್ತು ವೈಚಾರಿಕತೆ ನೆಲೆಯಲ್ಲಿ ಚಿಂತಿಸಿದರು. ನಮ್ಮ ಬದುಕಿಗೆ ವಚನ ಸಾಹಿತ್ಯವು ದಾರಿದೀಪವಾಗಿದೆ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಕ ಆಯುಕ್ತ(ಚುನಾವಣೆ) ಬಿ.ಶರಣಪ್ಪ ಮಾತನಾಡಿ, 12ನೇ ಶತಮಾನದ ಶರಣರ ಕ್ರಾಂತಿಯು ಸಮಾಜದಲ್ಲಿನ ಧಾರ್ಮಿಕ, ಸಾಸಂಸ್ಕೃತಿಕ ವ್ಯವಸ್ಥೆಯಲ್ಲಿ ಪರಿವರ್ತನೆಗೆ ಕಾರಣವಾಯಿತು. ವಿಶೇಷವಾಗಿ ಜ್ಞಾನದ ಪ್ರಸಾರ, ಕಾಯಕ, ದಾಸೋಹ ಪರಂಪರೆಯ ಮೂಲಕ ಶರಣರು ಎಲ್ಲ ಕಾಯಕಜೀವಿಗಳಲ್ಲಿ ಆತ್ಮಬಲ ತುಂಬಿದರು ಎಂದರು.
ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣೆ ಮಾತನಾಡಿದರು.
ಪರಿಷತ್ತಿನ ತಾಲ್ಲೂಕಾಧ್ಯಕ್ಷ ಸಂಜಯ ಪಾಟೀಲ ಅಧ್ಯಕ್ಷತೆವಹಿಸಿದರು. ಪ್ರಮುಖರಾದ ಬಾಬುರಾವ ಮಡ್ಡೆ, ಪುಭಾಕರ ಸಲಗರೆ, ಶರಣಪ್ಪ ಗಂಟೆ, ಬಸವರಾಜ ಪವಾಡಶೆಟ್ಟಿ, ಕಲ್ಯಾಣರಾವ ಪಾಟೀಲ, ಗುರುಶಾಂತಪ್ಪ ಪಾಟೀಲ, ರೇವಣಸಿದ್ದಪ್ಪ ನಾಗೂರೆ, ಮಲ್ಲಪ್ಪ ಹತ್ತರಕಿ, ಭೀಮಾಶಂಕರ ಜಮಗಿ, ಮಹಾದೇವಪ್ಪ ಪಾಟೀಲ, ಪುಷ್ಪಾವತಿ ಚಟ್ಟಿ, ನರಸಪ್ಪ ಬಿರಾದಾರ, ಸತೀಶ ಸನ್ಮುಖ, ಕವಿತಾ ಬಿರಾದಾರ, ಮಹಾದೇವ ಜಿಡ್ಡೆ, ರಾಜೇಂದ್ರ ಗುಂಡ, ಸುಲ್ತಾನಪ್ಪ ವಾಗ್ದರಿಗಿ, ಸಿದ್ದರಾಮ ನಂದಗಾಂವ, ಮಹಾದೇವಿ ವಚ್ಚ, ಲಿಂಗರಾಜ ಪಾಟೀಲ, ಭಾಗೀರಥಿ ಮಡ್ಡೆ, ನಂದಾದೇವಿ ಮುಂಗೋಡೆ, ಮಲ್ಲಿನಾಥ ವಚ್ಚ, ಸಂತೋಷ ವೇದಪಾಠಕ, ಅಶೋಕ ರೆಡ್ಡಿ, ಎಲ್ ಎಸ್ ಬೀದಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಚನಗಾಯನ, ವಚನ ರಸಪ್ರಶ್ನೆ, ವಚನ ಕಂಠಪಾಠ ಹಾಗೂ ಶರಣರ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ, ಕಾಣಿಕೆ ವಿತರಣೆ ಮಾಡಲಾಯಿತು. ಕಾಯಕಜೀವಿಗಳಿಗೆ ಸನ್ಮಾನಿಸಲಾಯಿತು. ಸಂಗೀತ ಕಲಾವಿದ ಶಿವಶರಣಪ್ಪ ಪೂಜಾರಿ, ಅಶೋಕ ಆಳಂದ, ಮಲ್ಲಿನಾಥ ಯಲಶೆಟ್ಟಿ, ವಿಜಯ ಆಳಂದ ಅವರಿಂದ ವಚನ ಗಾಯನವು ಮನ ಸೆಳೆಯಿತು. ರಾಮಣ್ಣಾ ಸುತಾರ ನಿರೂಪಿಸಿದರೆ, ರಮೇಶ ಮಾಡಿಯಾಳಕರ್ ಸ್ವಾಗತಿಸಿದರು. ಅಪ್ಪಾಸಾಹೇಬ ತೀರ್ಥ ವಂದಿಸಿದರು.
ಆಳಂದ ಪಟ್ಟಣದ ವಿವಿದ್ದ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಬಸವಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದರು.







