ಕಲಬುರಗಿ | ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿಲ್ಲ, ಅವರಿಗೆ ಮಾರ್ಗದರ್ಶನದ ಅಗತ್ಯವಿದೆ: ಶಶೀಲ್ ನಮೋಶಿ

ಕಲಬುರಗಿ : ಕಲ್ಯಾಣ ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದ ಪ್ರದೇಶ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದರೂ, ಈ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಎಂದೂ ಹಿಂದೆ ಬಿದ್ದಿಲ್ಲ, ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಗುಣಮಟ್ಟದ ಶಿಕ್ಷಣದ ಕೊರತೆ ಇದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ ಅಭಿಪ್ರಾಯಪಟ್ಟರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂಆರ್‌ಎಂಸಿ ಸ್ಯಾಕ್ ಸಭಾಂಗಣದಲ್ಲಿ ನಡೆದ ಧಾರವಾಡದ ವಿದ್ಯಾ ಪಿ ಹಂಚಿನಮನಿ ಸಂಚಾಲಿತ ಎನ್ ಪಿಎಸ್ ಪದವಿಪೂರ್ವ ಕಾಲೇಜು ಕಲಬುರಗಿಯಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳ ಅಭಿನಂದನಾ ಹಾಗೂ ಧಾರವಾಡದ ಪ್ರತಿಷ್ಠಿತ ಜ್ಞಾನದೀಪ ಕೋಚಿಂಗ್ ಸೆಂಟರ್ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಶೀಲ್ ಜಿ. ನಮೋಶಿ ಮಾತನಾಡಿದರು.
ಬಹುತೇಕ ವಿದ್ಯಾ ಪಿ ಹಂಚಿನಮನಿ ಸಂಸ್ಥೆಯ ಉಪನ್ಯಾಸಕರಿಂದಲೇ ಪ್ರಾರಂಭವಾದ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನ ನೀಡುತ್ತಾ ಅವರ ಬಾಳಿಗೆ ದೀಪವಾಗಿರುವ ಜ್ಞಾನ ದೀಪ ಕೋಚಿಂಗ್ ಸೆಂಟರ್ ಸಹ ಇಲ್ಲಿ ಆರಂಭವಾಗುತ್ತಿರುವುದು ಇಲ್ಲಿನ ಬಹುತೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಈ ವೇಳೆ ಎನ್ ಪಿಎಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ವೀರಶೆಟ್ಟಿ ಖೇಣಿ, ನಿರ್ದೇಶಕರಾದ ವಿಶ್ವನಾಥ್ ಖೂಬಾ, ಗಣೇಶ ತಪಾಡಿಯಾ, ಮುಹ್ಮದ್ ಮೈನುದ್ದೀನ್, ಸಂಗಮೇಶ ಮಹಾಗಾಂವ್ಕರ್, ಅಮಿತ್ ಲೋಯಾ, ಮಹಾದೇವ ಖೇಣಿ, ಪ್ರಫುಲ್ ನಮೋಶಿ, ಹಂಚಿನಮನಿ ಸಂಸ್ಥೆಯ ಕಾರ್ಯದರ್ಶಿ ಮಿಲಿಂದ್, ಜಂಟಿ ಕಾರ್ಯದರ್ಶಿ ವರ್ಷಾ ಹಂಚಿನಮನಿ, ಶೈಕ್ಷಣಿಕ ಸಂಚಾಲಕರಾದ ರಾಜು ಕಡೆಮನಿ, ವಿಶ್ವನಾಥ್ ಗರುಡ ಉಪಸ್ಥಿತರಿದ್ದರು.







