ಕಲಬುರಗಿ | ಯಾವುದೇ ಸಂಸ್ಥೆಯ ಬೆಳವಣಿಗೆಯಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಮಹತ್ವದ್ದಾಗಿದೆ: ಉಮಾ ರೇವೂರ

ಕಲಬುರಗಿ: ಯಾವುದೇ ಸಂಸ್ಥೆಯು ಬೆಳವಣಿಗೆಯಾಗಬೇಕಾದರೆ ಸಾಮಾಜಿಕ ಜಾಲತಾಣಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ 12 ಅಂಶಗಳ ಸಂಯೋಜಕಿ ಡಾ.ಉಮಾ ರೇವೂರ ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜಾಲತಾಣಗಳ ಸಂಯೋಜಕರ ಸಭೆಯಲ್ಲಿ ಮಾತನಾಡಿದ ಡಾ.ಉಮಾ ರೇವೂರ, ಜನರ ಮೇಲೆ ಪ್ರಭಾವ ಬೀರುವ ಸಾಮಾಜಿಕ ಜಾಲತಾಣಗಳನ್ನು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮಾನವರಾದ ನಾವು ಅವುಗಳ ಬಳಕೆಯಿಲ್ಲದೆ ಒಂದು ದಿನ ಕೂಡ ಇರಲು ಸಾಧ್ಯವಿಲ್ಲ. ಇದು ಸ್ಪರ್ಧಾತ್ಮಕ ಯುಗ, ಒಂದು ಸಂಸ್ಥೆ ಸದೃಢವಾಗಿ ಬೆಳೆಯಬೇಕಾದರೆ ಸಾಮಾಜಿಕ ಜಾಲತಾಣಗಳ ಸದ್ಭಳಕೆ ಮಹತ್ವದ್ದಾಗಿದೆ. ನಾವು ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ. ಆ ಕೆಲಸಗಳು ಸಮಾಜಕ್ಕೂ ತಿಳಿಸಬೇಕಾಗಿರುವುದು ನಮ್ಮ ಕರ್ತವ್ಯ. ಪತ್ರಿಕಾ ಮಾಧ್ಯಮದ ಜೊತೆ ನಾವು ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಬಳಸಿಕೊಂಡಾಗ ಜನತೆಗೆ ತಿಳಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ಈ ವೇಳೆ ಸಂಸ್ಥೆಯ ವಿಶೇಷಾಧಿಕಾರಿ ಪರಮೇಶ್ ಬಿರಾದಾರ, ಮಾಧ್ಯಮ ಸಂಚಾಲಕ ಐ.ಕೆ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





