ದಸರಾ–ದೀಪಾವಳಿ ನಿಮಿತ್ತ ಕಲಬುರಗಿ ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರ

ಕಲಬುರಗಿ: ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಕಲಬುರಗಿ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಒಟ್ಟು 102 ಟ್ರಿಪ್ ಗಳ ವಿಶೇಷ ಉತ್ಸವ ರೈಲುಗಳ ಸಂಚಾರವನ್ನು ನಡೆಸಲಿದೆ.
ಮುಂಬೈ–ಚೆನ್ನೈ, ಮುಂಬೈ–ಲಾತೂರ್ ಹಾಗೂ ಕೊಲ್ಹಾಪುರ–ಕಲಬುರಗಿ ಮಾರ್ಗಗಳಲ್ಲಿ ಈ ವಿಶೇಷ ರೈಲುಗಳು ಸಂಚರಿಸಲಿದ್ದು, ಹಬ್ಬದ ಅವಧಿಯಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ರೈಲು ಸೇವೆ ಲಭ್ಯವಾಗಲಿದೆ.
ಮುಂಬೈ–ಚೆನ್ನೈ ನಡುವೆ 12 ವಿಶೇಷ ರೈಲು ಸಂಚಾರ:
ರೈಲು ಸಂಖ್ಯೆ 01015 CSMT ಮುಂಬೈ–ಚೆನ್ನೈ ಬೀಚ್ ಸಾಪ್ತಾಹಿಕ ವಿಶೇಷ ರೈಲು ಅಕ್ಟೋಬರ್ 14ರಿಂದ ನವೆಂಬರ್ 18, 2026ರವರೆಗೆ ಪ್ರತಿ ಬುಧವಾರ ರಾತ್ರಿ 12.35ಕ್ಕೆ CSMT ಮುಂಬೈನಿಂದ ಹೊರಟು ಅದೇ ದಿನ ರಾತ್ರಿ 11.30ಕ್ಕೆ ಚೆನ್ನೈ ಬೀಚ್ ತಲುಪಲಿದೆ. ಒಟ್ಟು 6 ಟ್ರಿಪ್‌ಗಳು ನಡೆಯಲಿವೆ.
ರೈಲು ಸಂಖ್ಯೆ 01016 ಚೆನ್ನೈ ಬೀಚ್–CSMT ಮುಂಬೈ ವಿಶೇಷ ರೈಲು ಅಕ್ಟೋಬರ್ 15ರಿಂದ ನವೆಂಬರ್ 19ರವರೆಗೆ ಪ್ರತಿ ಗುರುವಾರ ಬೆಳಿಗ್ಗೆ 4 ಗಂಟೆಗೆ ಚೆನ್ನೈ ಬೀಚ್‌ನಿಂದ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ CSMT ಮುಂಬೈ ತಲುಪಲಿದೆ. ಒಟ್ಟು 6 ಟ್ರಿಪ್‌ಗಳು ನಡೆಯಲಿವೆ.
ಈ ರೈಲುಗಳು ದಾದರ್, ಥಾಣೆ, ಕಲ್ಯಾಣ್, ಲೋನಾವಾಲಾ, ಪುಣೆ, ದೌಂಡ್, ಕುರ್ದುವಾಡಿ, ಸೋಲಾಪುರ, ಕಲಬುರಗಿ, ವಾಡಿ, ಕೃಷ್ಣಾ, ರಾಯಚೂರು, ಮಂತ್ರಾಲಯ ರಸ್ತೆ, ಆದೋನಿ, ಗುಂತಕಲ್, ಗೂಟಿ, ತಾಡಿಪತ್ರಿ, ಯರ್ರಗುಂಟ್ಲಾ, ಕಡಪಾ, ರಾಜಂಪೇಟ, ರೇಣಿಗುಂಟಾ ಹಾಗೂ ಅರಕ್ಕೋಣಂ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.
ರೈಲಿನಲ್ಲಿ 2 ಎಸಿ 2-ಟೈರ್, 2 ಎಸಿ 3-ಟೈರ್ ಹಾಗೂ 2 ಲಗೇಜ್ ಕಮ್ ಜನರೇಟರ್ ಕಮ್ ಬ್ರೇಕ್ ವ್ಯಾನ್‌ಗಳು ಸೇರಿದಂತೆ ಒಟ್ಟು 22 ಎಲ್‌ಎಚ್‌ಬಿ ಬೋಗಿಗಳು ಇರಲಿವೆ.
ಮುಂಬೈ–ಲಾತೂರ್ ನಡುವೆ 26 ವಿಶೇಷ ರೈಲು ಟ್ರಿಪ್‌ಗಳು:
ರೈಲು ಸಂಖ್ಯೆ 01105 CSMT ಮುಂಬೈ–ಲಾತೂರ್ ವಿಶೇಷ ರೈಲು ಅಕ್ಟೋಬರ್ 13ರಿಂದ ನವೆಂಬರ್ 24ರವರೆಗೆ ಪ್ರತಿ ಮಂಗಳವಾರ ಮತ್ತು ಗುರುವಾರ ರಾತ್ರಿ 12.35ಕ್ಕೆ CSMT ಮುಂಬೈನಿಂದ ಹೊರಟು ಅದೇ ದಿನ ಬೆಳಿಗ್ಗೆ 11.40ಕ್ಕೆ ಲಾತೂರ್ ತಲುಪಲಿದೆ. ಒಟ್ಟು 13 ಟ್ರಿಪ್‌ಗಳು ನಡೆಯಲಿವೆ.
ರೈಲು ಸಂಖ್ಯೆ 01106 ಲಾತೂರ್–CSMT ಮುಂಬೈ ವಿಶೇಷ ರೈಲು ಇದೇ ಅವಧಿಯಲ್ಲಿ ಪ್ರತಿ ಮಂಗಳವಾರ ಮತ್ತು ಗುರುವಾರ ಸಂಜೆ 4.30ಕ್ಕೆ ಲಾತೂರ್‌ನಿಂದ ಹೊರಟು ಮರುದಿನ ಬೆಳಿಗ್ಗೆ 4.10ಕ್ಕೆ CSMT ಮುಂಬೈ ತಲುಪಲಿದೆ. ಒಟ್ಟು 13 ಟ್ರಿಪ್‌ಗಳು ನಡೆಯಲಿವೆ.
ಈ ರೈಲುಗಳು ದಾದರ್, ಥಾಣೆ, ಕಲ್ಯಾಣ್, ಲೋನಾವಾಲಾ, ಪುಣೆ, ಉರುಳಿ, ದೌಂಡ್, ಭಿಗ್ವಾನ್, ಜೆಯೂರ್, ಕುರ್ದುವಾಡಿ, ಬಾರ್ಶಿ ಟೌನ್, ಧಾರಾಶಿವ್ ಹಾಗೂ ಹರಾಂಗೂಲ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.
ರೈಲಿನಲ್ಲಿ 4 ಎಸಿ 3-ಟೈರ್, 11 ಸ್ಲೀಪರ್ ಕ್ಲಾಸ್, 5 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು ಸೇರಿದಂತೆ ಒಟ್ಟು 22 ಐಸಿಎಫ್ ಬೋಗಿಗಳು ಇರಲಿವೆ.
ಕೊಲ್ಹಾಪುರ–ಕಲಬುರಗಿ ನಡುವೆ 64 ವಿಶೇಷ ರೈಲು ಟ್ರಿಪ್‌ಗಳು:
ರೈಲು ಸಂಖ್ಯೆ 01451 ಕೊಲ್ಹಾಪುರ–ಕಲಬುರಗಿ ವಿಶೇಷ ರೈಲು ಅಕ್ಟೋಬರ್ 10ರಿಂದ ನವೆಂಬರ್ 15ರವರೆಗೆ ಶುಕ್ರವಾರ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 6.10ಕ್ಕೆ ಕೊಲ್ಹಾಪುರದಿಂದ ಹೊರಟು ಅದೇ ದಿನ ಸಂಜೆ 4.10ಕ್ಕೆ ಕಲಬುರಗಿ ತಲುಪಲಿದೆ. ಒಟ್ಟು 32 ಟ್ರಿಪ್‌ಗಳು ನಡೆಯಲಿವೆ.
ರೈಲು ಸಂಖ್ಯೆ 01452 ಕಲಬುರಗಿ–ಕೊಲ್ಹಾಪುರ ವಿಶೇಷ ರೈಲು ಇದೇ ಅವಧಿಯಲ್ಲಿ ಶುಕ್ರವಾರ ಹೊರತುಪಡಿಸಿ ಪ್ರತಿದಿನ ಸಂಜೆ 6.10ಕ್ಕೆ ಕಲಬುರಗಿಯಿಂದ ಹೊರಟು ಮರುದಿನ ಬೆಳಿಗ್ಗೆ 5.40ಕ್ಕೆ ಕೊಲ್ಹಾಪುರ ತಲುಪಲಿದೆ. ಒಟ್ಟು 32 ಟ್ರಿಪ್‌ಗಳು ನಡೆಯಲಿವೆ.
ಈ ರೈಲುಗಳು ಹಟ್ಕನಗಲೆ, ಜಯಸಿಂಗ್‌ಪುರ, ಮೀರಜ್ ಜಂಕ್ಷನ್, ಅರಗ್, ಬೆಳಂಕಿ, ಸುಲ್ಗರೆ, ಕವಥೆ ಮಹಾಂಕಲ್, ಲಂಗರ್‌ಪೇತ್, ಧಲ್ಗಾಂವ್, ಮಹಾಸೋಬಾ ಡೊಂಗರ್ಗಾಂವ್, ಜಾವಲೆ, ವಾಸುದ್, ಸಂಗೋಲಾ, ಪಂಢರಪುರ, ಮೊಡ್ನಿಂಬ್, ಕುರ್ದುವಾಡಿ ಜಂಕ್ಷನ್, ಸೋಲಾಪುರ ಹಾಗೂ ಕಲಬುರಗಿ ಜಂಕ್ಷನ್ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.
ರೈಲಿನಲ್ಲಿ 4 ಎಸಿ 3-ಟೈರ್, 6 ಸ್ಲೀಪರ್ ಕ್ಲಾಸ್, 6 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು ಸೇರಿದಂತೆ ಒಟ್ಟು 18 ಐಸಿಎಫ್ ಬೋಗಿಗಳು ಇರಲಿವೆ.
ಈ ಉತ್ಸವ ವಿಶೇಷ ರೈಲುಗಳಲ್ಲಿ ವಿಶೇಷ ಶುಲ್ಕದಡಿ ಪ್ರಯಾಣಿಸಲು ಸೆಪ್ಟೆಂಬರ್ 27ರಿಂದ ಎಲ್ಲಾ ಗಣಕೀಕೃತ ಮೀಸಲಾತಿ ಕೇಂದ್ರಗಳಲ್ಲಿ ಹಾಗೂ ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ರೈಲ್‌ಒನ್ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸುವಿಕೆ ಲಭ್ಯವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.






