ಮಹಿಳೆಯರು ಉದ್ಯಮಿಗಳಾಗಲು ಟೈಲರಿಂಗ್ ಸಹಕಾರಿ: ಶಾಸಕಿ ಕನೀಝ್ ಫಾತೀಮಾ

ಕಲಬುರಗಿ: ಮಹಿಳೆಯರು ಸ್ವಯಂ ಉದ್ಯಮಿಗಳಾಗಲು ಟೈಲರಿಂಗ್ ತರಬೇತಿ ಮತ್ತು ಉದ್ಯಮ ಸಹಕಾರಿಯಾಗಿದೆ ಎಂದು ಉತ್ತರ ಮತಕ್ಷೇತ್ರದ ಶಾಸಕಿ, ರಾಜ್ಯ ರೇಷ್ಮೆ ಉದ್ಯಮ ನಿಗಮದ ಅಧ್ಯಕ್ಷೆ ಕನೀಝ್ ಫಾತೀಮಾ ಹೇಳಿದರು.
ಮಂಗಳವಾರ ನಗರದ ಮಿಲತ್ ನಗರ ಬಡಾವಣೆಯಲ್ಲಿ ಸಫುರಾ ಮಹಿಳಾ ಸ್ವ ಸಹಾಯ ಸಂಘದ ವತಿಯಿಂದ ಮೂರು ತಿಂಗಳ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನೆಯಲ್ಲಿದ್ದು ಟೈಲರಿಂಗ್ ಉದ್ಯಮದ ಮೂಲಕ ತನ್ನ ಕಲೆ, ಕೌಶಲ್ಯದ ಮೂಲಕ ಸಮಾಜದಲ್ಲಿ ಯಶಸ್ವಿ ಉದ್ಯಮಿಯಾಗಲು ಪ್ರೇರಣೆ ನೀಡುವ ಕೆಲಸ ಆಗಬೇಕು ಎಂದರು.
ಸಫುರಾ ಮಹಿಳಾ ಸ್ವ ಸಹಾಯ ಸಂಘ ಮಹಿಳೆಯರ ಸಬಲೀಕರಣ ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದು ಉದ್ಯಮಿಗಳಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಫರಾಜ್ ಉಲ್ ಇಸ್ಲಾಂ, ಇಸ್ಲಾಮಾಬಾದ್ ಕಾಲೋನಿ ಪಾಲಿಕೆ ಸದಸ್ಯ ರಿಯಾಜ್ ಅಹ್ಮದ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ನಹಿಮ್ ಖಾನ್ ಸಾಬ್, ಎಸೆಂಟ್ ಶಾಲೆಯ ಫಯಾಜೊದ್ದೀನ್, ರೀಜ್ವಾನ್ ಅಹ್ಮದ್ ಪಟೇಲ್, ಮಹಮುದ್ ಪಟೇಲ್, ಅಫಜಲ್ ಗೂಟುರ್, ಸಫುರಾ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷರಾದ ಅಹ್ಮದಿ ಬೇಗಂ, ಕಾರ್ಯದರ್ಶಿ ನಸೀಮ್ ಬಾನು, ಶಿಕ್ಷಕಿ ಪರ್ವಿನ್ ಬೇಗಂ, ಜಾವೀದ್ ಪಟೇಲ್, ಮಹಿನ್ ಖಾನ್, ಕಮಾಲ್ ಪಾಶಾ, ಶಾಕೀರ್ ಪಟೇಲ್, ರಾಬಿಯಾ ಬಿ, ಸೇರಿದಂತೆ ಮುಂತಾದವರು ಇದ್ದರು.







