ಕಲಬುರಗಿ | ವೈನ್ ಶಾಪ್ ನಲ್ಲಿ ಕಳ್ಳತನ ಪ್ರಕರಣ: ಆರೋಪಿಯೋರ್ವನ ಬಂಧನ

ಕಲಬುರಗಿ: ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಆಕಾಶ ವೈನ್ಸ್ ನಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಿ, ಆತನ ಬಳಿ ₹50,000 ನಗದು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ 2024ರ ಡಿ.10ರಂದು, ಆಕಾಶ ವೈನ್ಸ್ ಮ್ಯಾನೇಜರ್ ಚಂದ್ರಶೇಖರ ಮೇಲಕೇರಿ ಅವರು, ಕೌಂಟರ್‌ನಲ್ಲಿ ಉಳಿಸಿದ್ದ ₹1,30,000 ನಗದು ಕಳ್ಳತನವಾಗಿದೆ ಎಂದು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ, ಆರೋಪಿತ ಮಹ್ಮದ್ ಅಶ್ಫಾಕ್ (23) ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನಿಂದ ರೂ. 50,000 ನಗದು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರನ್ನು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ಶ್ಲಾಘಿಸಿದ್ದಾರೆ.
Next Story





