ಕಳ್ಳತನ ಆರೋಪಿ ಬಂಧನ ; ಲಕ್ಷಾಂತರ ರೂ. ಮೌಲ್ಯದ ಸ್ವತ್ತು ವಶ : ಡಾ.ಶರಣಪ್ಪ ಎಸ್.ಡಿ.

ಕಲಬುರಗಿ, ಡಿ.11: ಇಲ್ಲಿನ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಕಳ್ಳತನ ಮಾಡಿ ಮಹಾರಾಷ್ಟ್ರದ ಪುಣೆಗೆ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಹದಿನೈದು ದಿನಗಳಲ್ಲೇ ಬಂಧಿಸಿ, ಸುಮಾರು 20ರಿಂದ 40 ಲಕ್ಷ ರೂ.ಗಳ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಹೇಳಿದ್ದಾರೆ.
ಧಾರವಾಡದ ಎಮ್ಮೆಕೆರೆ ನಿವಾಸಿ, ಮಹಾರಾಷ್ಟ್ರದ ಪುಣೆಯ ಕಲವಾಡ ಬಸ್ತಿ ಲೋಗಂನ ಅಡಿಗೆ ಭಟ್ಟ ನವೀನ್ (49) ಬಂಧಿತ ಆರೋಪಿಯಾಗಿದ್ದಾನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಾಚರಣೆ ಕೈಗೊಂಡ ಸ್ಟೇಷನ್ ಬಝಾರ್ ಠಾಣೆಯ ಪಿಐ ಗುರುಲಿಂಗಪ್ಪ ಪಾಟೀಲ್, ಸಿಬ್ಬಂದಿ ಸಿರಾಜ್ ಪಟೇಲ್, ಪ್ರಭಾಕರ್, ಮೋಸಿನ್, ಯಲ್ಲಪ್ಪ, ಶಿವಲಿಂಗ, ಮಲ್ಲಣ್ಣ, ಸಂಗಣ್ಣ, ಸುಮೀತ್ ಹಾಗೂ ಚನ್ನವೀರೇಶ್ ಅವರಿಗೆ ನಗರ ಪೋಲಿಸ್ ಆಯುಕ್ತರು ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪ ಪೋಲಿಸ್ ಆಯುಕ್ತ ಪ್ರವೀಣ್ ನಾಯಕ್, ಸಹಾಯಕ ಪೋಲಿಸ್ ಆಯುಕ್ತ ಶರಣಬಸಪ್ಪ ಸುಬೇದಾರ್ ಮುಂತಾದವರು ಉಪಸ್ಥಿತರಿದ್ದರು.





